ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶಾದ್ಯಂತ ದಿಢೀರನೇ ಶೇ.55%ಕ್ಕೆ ಏರಿದ ಕೊರೊನಾ: 500ಕ್ಕೂ ಹೆಚ್ಚು ಸಾವು

ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಕೊರೊನಾ ಹೊಸ ಪ್ರಕರಣಗಳು ದಿಢೀರ್ ಏರಿಕೆಯಾಗಿವೆ. ಪಾಸಿಟಿವಿಟಿ ದರ ಶೇ.55%ರಷ್ಟು ಜಿಗಿತ ಕಂಡಿದೆ. ಮತ್ತು ಇದೇ ಅವಧಿಯಲ್ಲಿ ಸೋಂಕಿತರ ಸಾವಿನ ಸಂಖ್ಯೆ 500ರ ಗಡಿಯನ್ನು ದಾಟಿದೆ. ಈ ಮೂಲಕ ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 58,097 ಜನರಿಗೆ ಕೋವಿಡ್ ಹೊಸದಾಗಿ ದೃಢಪಟ್ಟಿದೆ. ಇದರ ಜೊತೆಗೆ 15,389 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೇ ಕಳೆದ 24 ಗಂಟೆಯಲ್ಲಿ ಸೋಂಕಿತ 534 ಸಾವನ್ನಪ್ಪಿರೋದಾಗಿ ತಿಳಿಸಿದೆ.

ಇನ್ನೂ ಇಂದಿನ ಕೊರೋನಾ ಪಾಸಿಟಿವ್ ಪ್ರಕರಣದಿಂದಾಗಿ ದೈನಂದಿನ ಧನಾತ್ಮಕತೆ ದರ ಶೇ.4.18%ಕ್ಕೆ ಏರಿಕೆಯಾಗಿದೆ. ಈಗ ಭಾರತದಲ್ಲಿ 2,14,004 ಸಕ್ರೀಯ ಕೊರೋನಾ ಪ್ರಕರಣಗಳಿದ್ದಾವೆ. ಇದುವರೆಗೆ 3,43,21,803 ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೇ 4,82,551 ಮಂದಿ ಸೋಂಕಿತರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ.

Edited By : Nagaraj Tulugeri
PublicNext

PublicNext

05/01/2022 01:45 pm

Cinque Terre

36.37 K

Cinque Terre

4

ಸಂಬಂಧಿತ ಸುದ್ದಿ