ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಸೋಂಕಿನ ತೀವ್ರತೆ ಹಾಗೂ ಹರಡುವಿಕೆ ಹೆಚ್ಚಾಗುತ್ತಿದೆ. ಈ ನಡುವೆ ಸೋಂಕನ್ನು ಶೀಘ್ರದಲ್ಲಿ ಪತ್ತೆ ಮಾಡುವ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಅನುಮೋದನೆ ನೀಡಿದೆ. ಈ ಕಿಟ್‌ಅನ್ನು ಟಾಟಾ ಮೆಡಿಕಲ್ಸ್ ತಯಾರಿಸಿದೆ.
ಒಮಿಕ್ರಾನ್ ಸೋಂಕು ಪತ್ತೆ ಮಾಡುವ ಈ ಕಿಟ್‌ಗೆ 'ಓಮೈಸ್ಯೂರ್' (Omisure) ಎಂದು ಹೆಸರಿಸಲಾಗಿದೆ. ಮೂಲಗಳ ಪ್ರಕಾರ ಮುಂಬೈನ ಟಾಟಾ ಮೆಡಿಕಲ್ (ಟಾಟಾ ಮೆಡಿಕಲ್ & ಡಯಾಗ್ನೋಸ್ಟಿಕ್ಸ್) ಕಿಟ್ ಅನ್ನು ಡಿಸೆಂಬರ್ 30 ರಂದು ಅನುಮೋದಿಸಲಾಗಿದ್ದು, ಅದರ ಮಾಹಿತಿಯು ಈಗ ಮುನ್ನೆಲೆಗೆ ಬಂದಿದೆ. ಸದ್ಯಕ್ಕೆ, ದೇಶದಲ್ಲಿ ಒಮಿಕ್ರಾನ್ ಪತ್ತೆಹಚ್ಚಲು ಮತ್ತೊಂದು ಕಿಟ್‌ಅನ್ನು ಬಳಸಲಾಗುತ್ತಿದೆ. ಆ ಮಲ್ಟಿಪ್ಲೆಕ್ಸ್ ಕಿಟ್‌ಅನ್ನು ಅಮೆರಿಕದ ಥರ್ಮೋ ಫಿಶರ್ ಮಾರಾಟ ಮಾಡುತ್ತಿದೆ. ಈ ಕಿಟ್ S-ಜೀನ್ ಟಾರ್ಗೆಟ್ ಫೇಲ್ಯೂರ್ ತಂತ್ರವನ್ನು ಬಳಸಿಕೊಂಡು ಒಮೈಕ್ರಾನ್ ಅನ್ನು ಪತ್ತೆ ಮಾಡುತ್ತದೆ.
PublicNext
05/01/2022 07:25 am