ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಸ್ಪೋಟಗೊಳ್ಳುತ್ತಿದೆ. ದಿನ ಬಿಟ್ಟು ದಿನ ಕೇಸ್ ಪತ್ತೆ ಆಗುತ್ತಿವೆ. ಟ್ರಾವೆಲ್ ಹಿಸ್ಟರಿನೇ ಇಲ್ಲ. ಆದರೂ ಭದ್ರವಾತಿಯ 20 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಗೆ ಒಮಿಕ್ರಾನ್ ಬಂದಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಒಮಿಕ್ರಾನ್ ಕೇಸ್ ದಿನೇ ದಿನೇ ಹೆಚ್ಚಾಗುತ್ತಿವೆ. ಭದ್ರವಾತಿಯಲ್ಲಿ ಒಂದು ಕೇಸ್ ಪತ್ತೆ ಆಗಿದ್ದರೇ, ಉಡುಪಿಯ ಒಂದೇ ಕುಟುಂಬದ ಇಬ್ಬರಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ ಎಂದು ಸುಧಾಕರ್ ವಿವರಿಸಿದ್ದಾರೆ.
ಈ ಸಲ ಬೆಂಗಳೂರು ಬಿಟ್ಟು ರಾಜ್ಯದ ಇತರ ಜಿಲ್ಲೆಯಲ್ಲಿ ಒಮಿಕ್ರಾನ್ ಆಕ್ರಮಿಸುತ್ತಿದೆ. ಧಾರವಾಡದಲ್ಲಿ 54 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ತಗುಲಿದೆ.
ಉಡುಪಿಯ 82 ಮತ್ತು 73 ವರ್ಷದ ವೃದ್ದ ದಂಪತಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ. ಮಂಗಳೂರಿನ 19 ವರ್ಷದ ಯುವತಿಗೂ ಒಮಿಕ್ರಾನ್ ಸೋಂಕು ತಗುಲಿದೆ. ಅಲ್ಲಿಗೆ ರಾಜ್ಯದಲ್ಲಿ ಒಮಿಕ್ರಾನ್ ಕೇಸ್ 19 ಕ್ಕೆ ಏರಿದಂತಾಗಿದೆ ಎಂದು ಟ್ವಿಟರ್ ನಲ್ಲಿಯೇ ಈ ಎಲ್ಲ ವಿಷಯ ಹಂಚಿಕೊಂಡಿದ್ದಾರೆ.
PublicNext
20/12/2021 11:09 am