ಬೆಂಗಳೂರು: ಹೆಮ್ಮಾರಿ ಸೋಂಕು ಕೊರೊನಾಗೆ ಮದ್ದಾಗಿರುವ ಕೋವಿಡ್ ಲಸಿಕೆ ಪಡೆದಿರುವವರು ಒಂದುಕಡೆಯಾದ್ರೆ,ಲಸಿಕೆ ನಿರಾಕರಿಸುತ್ತಿರುವವರು ಒಂದುಕಡೆ.ಇದರ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದೇಶದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ಮೂರನೇ ಮಹಾನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಜ.16 ರಿಂದ ಈವರೆಗೆ ಎಲ್ಲ ವರ್ಗದ ಜನರು ಸೇರಿ ಒಂದೂವರೆ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟ ಒಟ್ಟು 91.70 ಲಕ್ಷ ಜನರಿಗೆ ತಲಾ 2 ಡೋಸ್ ಗಳಂತೆ 1.83 ಕೋಟಿ ಡೋಸ್ ಲಸಿಕೆ ನೀಡಬೇಕಿದೆ. ಇನ್ನು 33 ಲಕ್ಷ ಡೋಸ್ ಲಸಿಕೆ ನೀಡಿದಲ್ಲಿ ಪಾಲಿಕೆಯಿಂದ ನಿಗದಿಗೊಳಿಸಲಾಗಿದ್ದ ಗುರಿ ಶೇ.100 ತಲುಪಲಿದೆ. ಈ ವರೆಗೆ 83.37 ಲಕ್ಷ ಮಂದಿ (ಶೇ.91) ಮೊದಲ ಡೋಸ್ ಮತ್ತು 66.95 ಲಕ್ಷ ಮಂದಿ (ಶೇ.74) ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
PublicNext
19/12/2021 06:54 pm