ಬೆಂಗಳೂರು: ಕರ್ನಾಟಕ ದಲ್ಲಿ ಒಮಿಕ್ರಾನ್ ಪ್ರಕರಣ 8ಕ್ಕೆ ಏರಿಕೆ ಕಂಡಿದೆ. ಈ ಬಗ್ಗೆ ಸಚಿವ ಡಾ.ಕೆ. ಸುಧಾಕರ ಟ್ವೀಟ್ ಮಾಡಿದ್ದಾರೆ.
ವಿದೇಶದಿಂದ ವಾಪಸ್ ಆದ ಮೂವರು ಸೇರಿದಂತೆ ಒಟ್ಟು 5 ಮಂದಿಗೆ ಒಮಿಕ್ರಾನ್ ಸೋಂಕು ಇಂದು ದೃಢಪಟ್ಟಿದೆ.
ಇಂಗ್ಲೆಂಡ್‌ನಿಂದ ಹಿಂತಿರುಗಿದ 19 ವರ್ಷದ ಯುವಕನಿಗೆ, ನೈಜೀರಿಯಾದಿಂದ ವಾಪಸ್ ಆದ 52 ವರ್ಷದ ವ್ಯಕ್ತಿಗೆ ಹಾಗೂ ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ 33 ವರ್ಷದ ವ್ಯಕ್ತಿಗೆ ಒಮಿಕ್ರಾನ್ ತಗುಲಿದೆ.
ದೆಹಲಿಯಿಂದ ಹಿಂತಿರುಗಿದ 36 ವರ್ಷದ ಪುರುಷ ಹಾಗೂ 76 ವರ್ಷದ ಮಹಿಳೆಗೆ ಒಮಿಕ್ರಾನ್ ದೃಢ ಪಟ್ಟಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
PublicNext
16/12/2021 10:25 pm