ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿದೇಶದಿಂದ ಬಂದ ಇಬ್ಬರಲ್ಲಿ ಕೊರೊನಾ ಪಾಸಿಟಿವ್

ಬೆಂಗಳೂರು: ವಿದೇಶದಿಂದ ಬೆಂಗಳೂರಿಗೆ ಬಂದುಳಿದ ಇಬ್ಬರು ಪ್ರಯಾಣಿಕರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿನೋಮ್ ಸೀಕ್ವೆನ್ಸ್‌ಗೆ ಎರಡು ಸ್ಯಾಂಪಲ್ ಕೊಡಲಾಗಿದೆ. ವಿದೇಶದಿಂದ ಬಂದ ಎಲ್ಲರನ್ನೂ ಅವರ ನಿವಾಸದಲ್ಲೇ ಕ್ವಾರಂಟೈನ್ ಮಾಡಲಾಗುತ್ತಿದೆ. ಪ್ರತ್ಯೇಕ ಸಾಂಸ್ಥಿಕ ಕ್ವಾರಂಟೈನ್ ಆಗಿಲ್ಲ. ಸದ್ಯಕ್ಕಂತೂ ಸೂಕ್ಷ್ಮ ಪರಿಸ್ಥಿತಿ ಇದೆ. ಹೊಸ ವರ್ಷ, ಕ್ರಿಸ್ಮಸ್ ಆಚರಣೆ ವಿಚಾರವಾಗಿ ಸರ್ಕಾರ ಅಂತಿಮ‌ ತೀರ್ಮಾನ ಕೈಗೊಳ್ಳಿದೆ. ಸದ್ಯಕ್ಕೆ ಇದಕ್ಕೆಲ್ಲ ಪೂರಕ ವಾತಾವರಣ ಇಲ್ಲ. ವೈರಸ್ ಪದೇ ಪದೇ ರೂಪಾಂತರ ಆಗುತ್ತ ಇರುತ್ತದೆ. ಹೀಗಾಗಿ ವೈರಸ್ ಪ್ರಮಾಣ ಆಧರಿಸಿ ಸರ್ಕಾರ ಪ್ರತಿ ಬಾರಿ ಮಾರ್ಗಸೂಚಿ ಹೊರಡಿಸಲಿದೆ ಎಂದು ಹೇಳಿದ್ದಾರೆ.

Edited By :
PublicNext

PublicNext

29/11/2021 03:39 pm

Cinque Terre

48.79 K

Cinque Terre

0

ಸಂಬಂಧಿತ ಸುದ್ದಿ