ವರದಿ: ಗಣೇಶ್ ಹೆಗಡೆ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೋವಿಡ್ 3ನೇ ಅಲೆಯ ಭೀತಿ ಎದುರಾಗಿದೆ. ನಗರದ ನಾಲ್ಕು ವಾರ್ಡ್ ಗಳಲ್ಲಿ ನಿಧಾನವಾಗಿ ಕೋವಿಡ್ ಸೋಂಕಿನ ಪ್ರಕರಣದಲ್ಲಿ ಏರಿಕೆ ಕಂಡು ಬರ್ತಿದೆ!
ಬಿಬಿಎಂಪಿ ವ್ಯಾಪ್ತಿಯ ಕೋರಮಂಗಲ, ಹಗದೂರು, ಬೆಳ್ಳಂದೂರು ಹಾಗೂ ಬೇಗೂರು ವಾರ್ಡ್ ನಲ್ಲಿ ನಿತ್ಯ ತಲಾ 25 ಕೋವಿಡ್ ಪ್ರಕರಣಗಳು ಹೊಸದಾಗಿ ಪತ್ತೆಯಾಗುತ್ತಿದೆ.
ಸದ್ಯ, ಸಕ್ರಿಯ ಪ್ರಕರಣಗಳ ಸಂಖ್ಯೆ ಕೆಲ ದಿನಗಳಿಂದ ಇಳಿಮುಖವಾಗಿದೆ. ನಿನ್ನೆಯವರೆಗೆ ನಗರದಲ್ಲಿ 6498 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಹೀಗಾಗಿ ಪ್ರಕರಣಗಳು ಹೆಚ್ಚಿರುವ ವಾರ್ಡ್ ಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
PublicNext
10/11/2021 02:47 pm