ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

“ಹರ್ ಘರ್ ದಸ್ತಕ್’’ ಯೋಜನೆ : ಮನೆ ಬಾಗಿಲಿಗೆ ಲಸಿಕೆ

ನವದೆಹಲಿ: ಹೆಮ್ಮಾರಿ ಸೋಂಕಿಗೆ ರಕ್ಷಾ ಕವಚವಾಗಿರುವ ಕೋವಿಡ್ ಲಸಿಕೆ ಅಭಿಯಾನ ಮುಂದುವರೆದಿದೆ. ಸದ್ಯ ದೇಶದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ತಲುಪಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ “ಹರ್ ಘರ್ ದಸ್ತಕ್’ ಆಂದೋಲನ ಆರಂಭಿಸುವುದಾಗಿ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯಾ ತಿಳಿಸಿದ್ದಾರೆ.

ಲಸಿಕೆ ಅಭಿಯಾನದ ಕುರಿತಾಗಿ ರಾಜ್ಯಗಳ ಆರೋಗ್ಯ ಸಚಿವರ ಸಭೆಯ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಲು ಅರ್ಹರಿರುವವರಿಗೆ ಮತ್ತು ಇನ್ನೂ ಮೊದಲನೇ ಡೋಸ್ ಲಸಿಕೆ ಪಡೆಯದವರಿಗೆ ಮುಂದಿನ ತಿಂಗಳಿನಿಂದ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಲಾಗುವುದು.

ಈ ಆಂದೋಲನದಲ್ಲಿ, ಲಸಿಕೆ ಪಡೆಯುವುದಕ್ಕೆ ಅರ್ಹರಿರುವ ಜನಸಂಖ್ಯೆಯಲ್ಲಿ ಇನ್ನೂ ಶೇ. 50 ಜನಸಂಖ್ಯೆಗೆ ಲಸಿಕೆ ನೀಡಿರದ 48 ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ.

Edited By : Nirmala Aralikatti
PublicNext

PublicNext

28/10/2021 07:57 am

Cinque Terre

32.49 K

Cinque Terre

1