ಮುಂಬೈ:ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ, ಅವರ ತಾಯಿ ಮತ್ತು ಸಹೋದರಿ ಕೊರೊನಾ ಸೋಂಕು ತಗುಲಿದೆ. ಠಾಕ್ರೆ ಮತ್ತು ಅವರ ಸಹೋದರಿಯನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಡಾ.ಜಲೀಲ್ ಪಾರ್ಕರ್ ಹೇಳಿದ್ದಾರೆ.
53 ವರ್ಷ ವಯಸ್ಸಿನ ಠಾಕ್ರೆ ಇತ್ತೀಚೆಗೆ ನಾಸಿಕ್, ಪುಣೆ ಮತ್ತು ಥಾಣೆಗೆ ಭೇಟಿ ನೀಡಿದ್ದರು. ಹಾಗೂ ಮುಂದಿನ ಚುನಾವಣೆ ತಯಾರಿ ಕುರಿತು ಹಲವು ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದರು.
ಏತನ್ಮಧ್ಯೆ, ಮಹಾರಾಷ್ಟ್ರವು ಶುಕ್ರವಾರ 1,632 ಹೊಸ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿವೆ. ಮತ್ತು 40 ಮಂದಿ ಸಾವನ್ನಪ್ಪಿದ್ದಾರೆ. ಆದರೆ 1,744 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.
PublicNext
23/10/2021 10:12 pm