ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ 9 ಲಕ್ಷ ಜನರನ್ನು ಬಲಿ ಪಡೆದ ಕೋವಿಡ್

ಬೆಂಗಳೂರು: ವಿಶ್ವಕ್ಕೆ ಕಂಟಕವಾಗಿರುವ ಹೆಮ್ಮಾರಿ ಸೋಂಕು ಕೊರೊನಾ ಅನೇಕರ ಜೀವವನ್ನು ಬಲಿಪಡೆದಿದೆ. ಮಾರ್ಚ್ 2020 ರಿಂದ ಆಗಸ್ಟ್ 2021ರ ವರೆಗೆ ಕರ್ನಾಟಕದಲ್ಲಿ ಕೋವಿಡ್ ನಿಂದ 9 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

ಈ ಕುರಿತು ಸೋಮವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಮಾರ್ಚ್ 1, 2020 ರಿಂದ ಕೋವಿಡ್ -19 ನಿಂದ 37,423 ಮಂದಿ ಸಾವನನ್ನಪ್ಪಿದ್ದಾರೆ. ಆ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 9,40,416 ಆಗಿದೆ. ಅದರಲ್ಲಿ ಕಳೆದ ಎಂಟು ತಿಂಗಳಲ್ಲಿ ರಾಜ್ಯದಲ್ಲಿ 4,78,082 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಕಳೆದ 2 ವರ್ಷಗಳಲ್ಲಿ ರಾಜ್ಯದಲ್ಲಿ ಕೋವಿಡ್ ನಿಂದ ಉಂಟಾಗಿರುವ ಸಾವಿನ ಬಗ್ಗೆ ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಮಾರ್ಚ್ 1 2020 ರಿಂದ 31 ಡಿಸೆಂಬರ್ 2020 ರವರೆಗೆ 4,62,334 ಮಂದಿ ಸಾವನ್ನಪ್ಪಿದ್ದು, 1 ಜನವರಿ 2021 ರಿಂದ 31 ಆಗಸ್ಟ್31 ರವರೆಗೆ 4,78,082 ಜನ ಮರಣ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಕಚೇರಿಯ ದಾಖಲೆಗಳ ಪ್ರಕಾರ ಒಟ್ಟು ಸಾವಿನ ಸಂಖ್ಯೆ ಮತ್ತು ಪ್ರಸ್ತುತ ವರ್ಷದ ಸಂಖ್ಯೆಯನ್ನು ಸಮನ್ವಯಗೊಳಿಸಲಾಗುತ್ತಿದೆ.

ಆರ್ ಟಿ ಪಿಸಿಆರ್ ಪಾಸಿಟಿವ್ ಫಲಿತಾಂಶ ಹೊಂದಿದ್ದ ರೋಗಿಗಳ ಸಾವನ್ನು ಮಾತ್ರ ಕೋವಿಡ್ ಸಾವು ಎಂದು ಸರ್ಕಾರ ಪರಿಗಣಿಸಿದೆ ಎಂದು ಪ್ರಕಾಶ್ ರಾಥೋಡ್ ಹೇಳಿದರು, ಆದರೆ ಕೋವಿಡ್ ತರಹದ ರೋಗಲಕ್ಷಣಗಳೊಂದಿಗೆ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಸಾವನ್ನಪ್ಪಿದ್ದಾರೆ, ಹಾಗೂ ಅನೇಕರು ಕೋವಿಡ್ ಗೆ ತುತ್ತಾಗಿರುವುದು ಸಿಟಿ ಸ್ಕ್ಯಾನ ನಿಂದ ಕಂಡುಬಂದಿದೆ.

ಸಚಿವರು ನೀಡಿದ ಸಂಖ್ಯೆಗಳ ಪ್ರಕಾರ, ಸೆಪ್ಟೆಂಬರ್ 2020 ರಲ್ಲಿ 67,444 ಜನರು ಸಾವನ್ನಪ್ಪಿದ್ದಾರೆ, ಮೇ 2021 ರಲ್ಲಿ 77,221 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಜೂನ್ 2021 ರಲ್ಲಿ 99,665 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

Edited By : Nirmala Aralikatti
PublicNext

PublicNext

21/09/2021 01:25 pm

Cinque Terre

36.82 K

Cinque Terre

8