ದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 36,401 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದೇ ವೇಳೆ530 ಮಂದಿ ಮೃತಪಟ್ಟಿದ್ದು, 36 ಸಾವಿರದ 401 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ 64 ಸಾವಿರದ 129 ಮಂದಿಯಿದ್ದು ಕಳೆದ 149 ದಿನಗಳಲ್ಲಿ ಅತಿ ಕಡಿಮೆಯಾಗಿದೆ. ಇದುವರೆಗೆ 3 ಕೋಟಿಯ 15 ಲಕ್ಷದ 25 ಸಾವಿರದ 080 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 39 ಸಾವಿರದ 157 ಮಂದಿ ಗುಣಮುಖರಾಗಿದ್ದರೆ, ಮೃತಪಟ್ಟವರ ಒಟ್ಟು ಸಂಖ್ಯೆ 4 ಲಕ್ಷದ 33 ಸಾವಿರದ 049ಕ್ಕೇರಿದೆ. ಭಾರತದಲ್ಲಿ ಕೋವಿಡ್ -19 ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದೆ, ನಿನ್ನೆಯವರೆಗೆ ದೇಶದಲ್ಲಿ 50 ಕೋಟಿಗೂ ಅಧಿಕ ಪರೀಕ್ಷೆಗಳನ್ನು ನಡೆಸಿ ಮೈಲಿಗಲ್ಲನ್ನು ಸಾಧಿಸಿದೆ.
ಈ ಆಗಸ್ಟ್ ನಲ್ಲಿ ಸರಾಸರಿ 17 ಲಕ್ಷಕ್ಕಿಂತ ಹೆಚ್ಚಿನ ದೈನಂದಿನ ಪರೀಕ್ಷೆಯೊಂದಿಗೆ, ಭಾರತವು ದೇಶಾದ್ಯಂತ 50 ಕೋಟಿ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದೆ.ಕೇವಲ 55 ದಿನಗಳಲ್ಲಿ 10 ಕೋಟಿ ಕೊರೋನಾ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಆರಂಭಗೊಂಡ ನಂತರ ಇಲ್ಲಿಯವರೆಗೆ 56.64 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
PublicNext
19/08/2021 12:11 pm