ಬೀಜಿಂಗ್: ಚೀನಾದಲ್ಲಿ ಕೊರೊನಾ ರೂಪಾಂತರ ಡೆಲ್ಟಾ ಕೇಸ್‌ಗಳು ಏರಿಕೆಯಾಗುತ್ತಿದೆ. ಅಧಿಕಾರಿಗಳು ಮನೆಗಳಿಗೆ ಬೀಗ, ಕಬ್ಬಿಣದ ಸರಳುಗಳನ್ನು ಹಾಕುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಯು, "ಯಾವುದೇ ಮನೆಯ ಬಾಗಿಲು ದಿನದಲ್ಲಿ ಮೂರು ಬಾರಿ ತೆರೆದರೆ ಆ ಮನೆಯನ್ನು ಅಧಿಕಾರಿಗಳು ಬಂದು ಲಾಕ್ ಮಾಡುತ್ತಾರೆ. ಈಗಾಗಲೇ ಹಲವು ಮನೆಗಳಿಗೆ ಕಬ್ಬಿಣದ ಸರಳುಗಳನ್ನು ಹಾಕಲಾಗಿದೆ" ಎಂದು ಬರೆದುಕೊಂಡಿದ್ದಾನೆ.
ಮತ್ತೊಂದು ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಮನೆಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಿದ್ದಾಗ ಅಧಿಕಾರಿಗಳು ಸ್ಥಳಕ್ಕೆ ಬಂದು ಬಾಲಕಿಯನ್ನು ಮನೆಯೊಳಗೆ ಕಳುಹಿಸಿದ್ದಾರೆ. ಬಳಿಕ ಮನೆ ಬಾಗಿಲಿಗೆ ಕಬ್ಬಿಣದ ಸರಳುಗಳನ್ನು ಅಡವಡಿಸಿದ್ದಾರೆ.
PublicNext
13/08/2021 07:42 pm