ಜಿನೇವಾ: ಮಾರಣಾಂತಿಕ ಮಾರ್ಬರ್ಗ್ ವೈರಾಣು ಇರುವಿಕೆ ಪತ್ತೆಯಾಗಿದೆ ಎಂದು ವಿಶ್ವ ಅರೋಗ್ಯ ಸಂಸ್ಥೆ ಘೋಷಿಸಿದೆ. ಪಶ್ಚಿಮ ಆಫ್ರಿಕಾದ ರಾಷ್ಟ್ರ ಗಿನಿಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸೋಂಕು ಪತ್ತೆಯಾಗಿದೆ.
ಈಗಾಗಲೇ ಈ ಸೋಂಕಿಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದು ದೃಢಪಟ್ಟಿದೆ. ಗಿನಿಯಾದ ದಕ್ಷಿಣ ಪ್ರಾಂತ್ಯವಾದ ಗುಕೆಕೆಡೌ ಎಂಬಲ್ಲಿ ಮಾರ್ಬರ್ಗ್ ಸೋಂಕಿನಿಂದ ವ್ಯಕ್ತಿ ಸಾವನ್ನಪ್ಪಿದ್ದು ಆತನ ಸಂಪರ್ಕದಲ್ಲಿದ್ದ ಇನ್ನೂ ನಾಲ್ವರನ್ನು ಪತ್ತೆ ಹಚ್ಚಲಾಗಿದೆ. ಇದನ್ನು ಆರಂಭದಲ್ಲಿ ಹತ್ತಿಕ್ಕುವ ಅಗತ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆಫ್ರಿಕನ್ ಬಾವಲಿಗಳೇ ಈ ವೈರಸ್ ನ ಮೂಲ ಎಂದು ತಿಳಿದು ಬಂದಿದೆ.
PublicNext
10/08/2021 09:37 pm