ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಅತ್ಯಂತ ದುಬಾರಿ ಟೀ ಪೌಡರ್ : ಅಸ್ಸಾಂನ ಮನೋಹರಿ ಗೋಲ್ಡ್ ಟೀ ಪೌಡರ್ ರೇಟ್ ಎಷ್ಟು ಗೊತ್ತಾ?

ಗುಹಾವಟಿ : ವಿಶ್ವದ ಅತ್ಯಂತ ದುಬಾರಿ ಟೀ ಪೌಡರ್ ಎಂದು ಗುರುತಿಸಿಕೊಂಡಿರುವ ಅಸ್ಸಾಂನ ಮನೋಹರಿ ಗೋಲ್ಡ್ ಟೀ ಒಂದು ಕೆ.ಜಿ. ಪೌಡರ್ ರೇಟ್ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತದೆ. ಸ್ವಾದಿಷ್ಟ ಭರಿತ ಚಹಾಪುಡಿಯೆಂದೇ ಪ್ರಸಿದ್ಧಿ ಪಡೆದಿರುವ ಈ ಪೌಡರ್ ಒಂದು ಕೆ.ಜಿ. ಗೆ ಬರೋಬ್ಬರಿ 99,999ರೂ ಗೆ ಮಾರಾಟವಾಗುತ್ತಿದೆ.ಈ ಮೂಲಕ ತನ್ನದೇ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.

ಹರಾಜಿನಲ್ಲಿ ಸೌರವ್ ಟೀ ಟ್ರೇಡರ್ಸ್ ಕಂಪನಿ 99,999ರೂ ಗೆ ಬಿಡ್ ಮಾಡಿದೆ. ಚಹಾಪುಡಿಯನ್ನು ಗುಹಾವಟಿ ಮೂಲದ ವಿಷ್ಣು ಟೀ ಕಂಪನಿ ಖರೀದಿಸಿದೆ. ಈ ಕಂಪನಿ ಆನ್ಲೈನಲ್ಲಿ ತಮ್ಮ ವೆಬ್ಸೈಟ್ ಮೂಲಕ ವಿದೇಶಗಳಿಗೂ ಮನೋಹರಿ ಗೋಲ್ಡ್ ಚಹಾಪುಡಿಯನ್ನು ಮಾರಾಟ ಮಾಡುತ್ತದೆ.

ಕಳೆದ ವರ್ಷ ಒಂದು ಕಿಲೋ ಗ್ರಾಮ್ ಚಹಾಪುಡಿ75,000ರೂಗೆ ಮಾರಾಟವಾಗುವ ಮೂಲಕ ದಾಖಲೆ ಮಾಡಿತ್ತು. ಈ ಬಾರಿ 99,999ರೂ. ಮಾರಾಟವಾಗಿ ತನ್ನದೇ ದಾಖಲೆಯನ್ನು ಮುರಿದು, ತನ್ನ ಉತ್ಕೃಷ್ಟತೆಯನ್ನು ಸಾಬೀತುಪಡಿಸಿಕೊಂಡಿದೆ. ಈ ಟೀ ಎಲೆಗಳು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೊರೆಯುತ್ತದೆ. ಹೀಗಾಗಿ ಅಸ್ಸಾಂನ ಮನೋಹರಿ ಗೋಲ್ಡ್ ಚಹಾಪುಡಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಭಾರೀ ಬೇಡಿಕೆಯಿದೆ.

Edited By : Nirmala Aralikatti
PublicNext

PublicNext

14/12/2021 05:47 pm

Cinque Terre

31.52 K

Cinque Terre

0

ಸಂಬಂಧಿತ ಸುದ್ದಿ