ನವದೆಹಲಿ: ನಾಲ್ಕು ವಿಮಾನಗಳಲ್ಲಿ ಬ್ರಿಟನ್‌ನಿಂದ ದೆಹಲಿಗೆ ಆಗಮಿಸಿದ್ದ 11 ಮಂದಿಯಲ್ಲಿ ಕೋವಿಡ್ ಧೃಡಪಟ್ಟಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಪರೀಕ್ಷೆ ನಡೆಸಲಾಗಿದ್ದು, ಸೋಂಕು ತಗುಲಿರುವುದು ಧೃಡಪಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೀನ್‌ಸ್ಟ್ರಿಂಗ್ ಡಯಾಗ್ನೋಸ್ಟಿಕ್ ಸೆಂಟರ್ ಸ್ಥಾಪಕಿ ಗೌರಿ ಅಗರ್‌ವಾಲ್, ದೆಹಲಿ ವಿಮಾನ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಮಾಡುವ ಹೊಣೆ ಹೊತ್ತಿದೆ. ಇನ್ನೂ ನಾಲ್ಕು ವಿಮಾನಗಳಲ್ಲಿ ಬಂದಿದ್ದ 50 ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
PublicNext
23/12/2020 09:37 pm