ಬೆಂಗಳೂರು : ಉತ್ತಮ ಆರೋಗ್ಯಕ್ಕಾಗಿ ನಾವು ನೀವೆಲ್ಲ ಪ್ರತಿನಿತ್ಯ ಪತಂಜಲಿ, ಡಾಬರ್, ಪರಿಶುದ್ಧ ಜೇನುತುಪ್ಪ, ಸೇವಿಸುತ್ತೇವೆ.
ಆದ್ರೆ ಈ ಹನಿ ತಿಂದವರ ಜೀವಕ್ಕೆ ಹಾನಿ ಎನ್ನುವ ವಿಚಾರವನ್ನು ಸಂಶೋಧನೆವೊಂದು ಬಯಲು ಮಾಡಿದೆ.
ಇದು ಕಲಬೆರಕೆ ಜೇನು ತುಪ್ಪ ಎಂದು ಸಂಶೋಧನೆ ಹೇಳಿದೆ. ಈ ಜೇನುತುಪ್ಪದಲ್ಲಿ ಸಕ್ಕರೆ ಸಿರಪ್ ಮಿಶ್ರಣವಾಗಿದೆ ಎಂಬ ಆತಂಕಕಾರಿ ವಿಷಯವನ್ನು ಪರಿಸರದ ಮೇಲೆ ನಿಗಾ ಇಡುವ ‘ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್’ (ಸಿಎಸ್ ಇ) ಸಂಸ್ಥೆ ಸಂಶೋಧಕರು ಹೇಳಿದ್ದಾರೆ.
ಚೀನಾದ ಟ್ರೇಡ್ ಪೋರ್ಟಲ್ ಗಳು ಸಕ್ಕರೆ ಸಿರಪ್ ಪೂರೈಸುತ್ತವೆ. ದೇಶದ ಪ್ರಯೋಗಾಲಯಗಳಲ್ಲಿ ತಪಾಸಣೆಯಲ್ಲೂ ಪತ್ತೆಯಾಗದಂತ ಅಂಶಗಳನ್ನು ಆ ಸಿರಪ್ ಗಳಲ್ಲಿ ಸೇರಿಸಲಾಗುತ್ತದೆ.
ಈ ಕುರಿತು ಖಾಸಗಿ ವಾಹಿನಿವೊಂದು ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ ಅದು ದೃಢಪಟ್ಟಿದೆ ಎಂದು ಸಿಎಸ್ಇ ಮಹಾನಿರ್ದೇಶಕಿ ಸುನಿತಾ ನಾರಾಯಣ್ ಹೇಳಿದ್ದಾರೆ.
ಆದರೆ ಕೊನೆಗೆ ಜರ್ಮನಿ ಪ್ರಯೋಗಾಲಯದಲ್ಲಿ 13 ಬ್ರಾಂಡ್ ಗಳನ್ನು ತಪಾಸಣೆಗೆ ಒಳಪಡಿಸಿದಾಗ 8 ಬ್ರಾಂಡ್ ಗಳಲ್ಲಿ ಕಲಬೆರಕೆ ಪತ್ತೆಯಾಗಿದೆ ಎಂದು ವರದಿ ಹೇಳಿದೆ.
ಹಾಗಾಗಿ ಜೇನುತುಪ್ಪವನ್ನು ತಿನ್ನುವಾಗ ತುಸು ಎಚ್ಚರ..!
PublicNext
05/12/2020 03:06 pm