ಹರಿಯಾಣ : ದಿನದಿಂದ ದಿನಕ್ಕೆ ಡೆಡ್ಲಿ ಸೋಂಕು ಹಾವಳಿ ತಗ್ಗುತ್ತಿರುವ ಬೆನ್ನಲ್ಲೆ ಕೆಲವು ಕಡೆ ಇನ್ನು ಹಬ್ಬುತ್ತಲೆ ಇದೆ ಈ ಸೋಂಕು.
ಸೋಂಕು ಹೆಡೆಮುರಿಕಟ್ಟು ಲಸಿಕೆ ಸಿದ್ದಪಡಿಸಲು ಶತಾಯಗತಾಯ ಪ್ರಯತ್ನಗಳು ನಡೆಯುತ್ತಿದ್ದರು ಇನ್ನು ಲಸಿಕೆ ಜನಸಾಮಾನ್ಯರ ಕೈ ಸೇರಿಲ್ಲ.
ಇದರ ಮಧ್ಯೆ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಕೊರೊನಾ ಲಸಿಕೆ ಪಡೆದ 10 ದಿನಗಳ ಬಳಿಕ ಅವರಲ್ಲಿ ಸೋಂಕು ಪತ್ತೆಯಾಗಿದೆ.
ಸ್ವತಹ ಸಚಿವರೆ ಸೋಂಕು ದೃಢವಾಗಿರುವ ಬಗ್ಗೆ ಟ್ವೀಟ್ ಮಾಡಿ ನನಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಹೀಗಾಗಿ ಅಂಬಾಲಾ ಕ್ಯಾಂಟ್ ನಲ್ಲಿನ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದೆ.
ನನ್ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಎಲ್ಲರೂ ಕೊರೊನಾ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದ್ದಾರೆ.
ಅನಿಲ್ ವಿಜ್ ಅವರು ನವೆಂಬರ್ 20 ರಂದು ಅಂಬಾಲಾದ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದರು.
ಕೋವ್ಯಾಕ್ಸಿನ್ ನ ಮೂರನೇ ಹಂತದ ಪ್ರಯೋಗಕ್ಕೆ ಹರ್ಯಾಣದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಮಾರಕ ಕೊರೊನಾ ವೈರಸ್ ಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆ ಯನ್ನು, ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಸ್ವೀಕರಿದ್ದರು.
ಲಸಿಕೆ ಪಡೆದ ಮೇಲೆ ಅವರ ದೇಹದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಆದರೆ ಸುಮಾರು 10 ದಿನಗಳ ಬಳಿಕ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
PublicNext
05/12/2020 01:09 pm