ಲಂಡನ್: ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ಕಂಪನಿಗಳು ಜಂಟಿಯಾಗಿ ಸಂಶೋಧಿಸುತ್ತಿರುವ ಕೊರೊನಾ ಲಸಿಕೆ ಶೇ.೯೦ರಷ್ಟು ಯಶಸ್ವಿಯಾಗಿದೆ.
ಸದ್ಯ ಸಂಶೋಧನೆಯಾಗಿರುವ ಆಸ್ಟ್ರಾಜೆನೆಕಾ ಲಸಿಕೆಯೂ ಯಾವುದೇ ಅಡ್ಡಪರಿಣಾಮವಿಲ್ಲದೇ ಕೆಲಸ ಮಾಡಲಿದೆ. 1 ಡೋಸ್‍ನಲ್ಲೇ ಆಸ್ಟ್ರಾಜೆನೆಕಾ ಲಸಿಕೆ ಶೇಕಡಾ 90ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. 1 ತಿಂಗಳ ಬಳಿಕ 2 ಫುಲ್ ಡೋಸ್ ಕೊಟ್ಟಾಗ ಶೇ.62ರಷ್ಟು ಪರಿಣಾಮಕಾರಿಯಾಗಿ ಈ ಲಸಿಕೆ ಕೆಲಸ ಮಾಡಲಿದೆ ಎಂದು ಆಸ್ಟ್ರಾಜೆನೆಕಾ ಕಂಪನಿ ತಿಳಿಸಿದೆ.
ಆಸ್ಟ್ರಾಜೆನೆಕಾ ಲಸಿಕೆ ಈಗಾಗಲೇ ಅಂತಿಮ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಲಸಿಕೆ ಉತ್ಪಾದನೆಗೆ ಕಂಪನಿಯು ಅನುಮತಿ ಪಡೆಯುವ ನಿರೀಕ್ಷೆ ಇದೆ.
PublicNext
23/11/2020 09:42 pm