ವಿಳ್ಯದೆಲೆ ಕೇವಲ ಅಗಿಯಲು ಮಾತ್ರವಲ್ಲದೆ ಹಬ್ಬ ಹರಿದಿನ ಸೇರಿದಂತೆ ಸಾಸ್ತ್ರೋಕ್ತ ಪದ್ಧತಿಗಳಲ್ಲೂ ಅಷ್ಟೇ ಪ್ರಮುಖ ಪಾತ್ರ ವಹಿಸಿದೆ. ಈ ವಿಳ್ಯದೆಲೆಯನ್ನ ಹೆಚ್ಚಾಗಿ ಈ ಗ್ರಾಮೀಣ ಭಾಗದಲ್ಲಿ ಔಷಧಿ ಗುಣದ ಮದ್ದಾಗಿ ಸಹ ಬಳಸುತ್ತಾರೆ.
ನಿತ್ಯದ ಊಟ ಸಭೆ ಸಮಾರಂಭಗಳಲ್ಲಿ ಊಟವಾದ ಬಳಿಕ ಎಲೆ ಅಡಿಕೆ ಹಾಕಿಕೊಳ್ಳುವುದು ಸಾಮಾನ್ಯ. ಏಕೆಂದ್ರೆ ಎಲೆ ಅಡಿಕೆ ಜೊತೆಗೆ ಸುಣ್ಣ ಹಾಕಿದ್ರೆ ಸಾಕು ಊಟ ಮಾಡಿದ್ದೆಲ್ಲಾ ಕರುಗುವಿಕೆ ಪಕ್ರಿಯೆ ಸರಾಗವಾಗುತ್ತೆ.
ಹಾಗೇ ಎಲೆ ಅಡಿಕೆ ತಿಂದ್ರೆ ಎಲುಬುಗಳು ಗಟ್ಟಿ ಆಗುತ್ತೆ ಅಂತ ಗರ್ಭಿಣಿಯರಿಗೆ, ಬಾಣಂತಿಯರು ಊಟವಾದ ಬಳಿಕ ಎಲೆ ಅಡಿಕೆ ಅಗಿಯುವುದರಿಂದ ಶಾರಿರೀಕ ಸಮತೋಲನ ಕಾಪಾಡಲು ಸಹಕಾರಿಯಾಗುತ್ತದೆ.
ಈ ವೀಳ್ಯದೆಲೆಯಲ್ಲಿರುವ ಔಷಧಿ ಗುಣಗಳಂದ್ರೇ ಮಕ್ಕಳನ್ನು ಆರೋಗ್ಯ ಸಮಸ್ಯೆಯಿಂದ ದೂರವಿಡಲು ಸಹಕಾರಿಯಾಗಿದೆ. ಮಕ್ಕಳಲ್ಲಿ ನೆಗಡಿ, ಕೆಮ್ಮು,ಕಫ ತೊಂದರೆ ಇದ್ದಲ್ಲಿ ಅವರಿಗೆ ವೀಳ್ಯದೆಲೆ ರಸ. ಅದಕ್ಕೆ ಬಿಳಿ ಈರುಳ್ಳಿ ರಸ ಮತ್ತು ಜೇನುತುಪ್ಪ, ಶುದ್ಧ ಇಂಗನ್ನು ಸೇರಿಸಿ ಕೊಟ್ಟರೆ ಆ ತೊಂದರೆಗಳು ಕಳೆದು ಹೋಗುತ್ತವೆ.
ಇನ್ನು ಉಸಿರಾಟದ ತೊಂದರೆಗೆ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವಿಳ್ಯದೆಲೆಯನ್ನು ಎದೆಯ ಮೇಲಿಡುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾದ್ರೇ, ಬಿಸಿ ಎಣ್ಣೇಯಲ್ಲಿ ವಿಳ್ಯದೆಲೆ ಅಂದಿ ತಲೆಗೆ ಕಟ್ಟಿಕೊಂಡರೆ ತಲೆನೋವು ಮಾಯವಾಗುತ್ತದೆ. ಈ ವಿಳ್ಯೆದೆಲೆಯಲ್ಲಿ ನಾನಾ ವಿಧಗಳಿದ್ದು ಎಲ್ಲ ಎಲೆಗಳನ್ನು ಜೌಷಧಿಯ ಗುಣ ಸಾಧಾರಣವಾಗಿದೆ.
ಮುಖ್ಯವಾಗಿ ಶುಭ ಕಾರ್ಯಗಳಿಗೆ ಆರತಿ ತಟ್ಟೆಯ ಕಳಸ ಗಿಂಡಿಯಲ್ಲಿ ಈ ವಿಳ್ಯದೆಲೆ ಪ್ರಧಾನವಾಗಿದ್ದು, ಈ ವಿಳ್ಯದೆಲೆಯನ್ನು ಕತ್ರಿ ಕೈಯಲ್ಲಿ, ಎರೆಡೆ ಬೆರಳಲ್ಲಿ, ತೊಡೆಮೇಲೆ ಹಿಡಿಯಬಾರದೆಂಬ ಮಾತನ್ನು ಹಿರಿಯರು ಹೇಳುತ್ತಿದ್ದರು.
ಇನ್ನು ಕಪ್ಪನೆಯ ಕೇಶದ ಬಣ್ಣಕ್ಕಾಗಿ ಹಾಗೂ ಕೂದಲು ಉದುರುವಿಕೆ ತಡೆಗಟ್ಟಲು ವಿಳ್ಯದೆಲೆ ಬಿಸಿ ತೆಂಗಿನೆಣ್ಣೆ ಬಳಕೆಯೂ ಉತ್ತಮವಾಗಿದ್ದು, ದೇವರುಗಳಿಗೂ ಎಲೆ ಪೂಜೆ, ವಿಳ್ಯದೆಲೆ ಹಾರ ಹಾಕುವ ಪದ್ಧತಿ ರೂಢಿಯಲ್ಲಿದೆ.
PublicNext
21/11/2020 09:27 am