ಬೆಂಗಳೂರು: ಇವತ್ತು ಇಲ್ವೇ ನಾಳೆಯಾದರೂ ಕೊರೊನಾ ಎಂಬ ಮಹಾಮಾರಿ ಮೆರೆಯಾದಿತ್ತು ಎನ್ನುವ ಜನರ ಕನಸ್ಸು ಭಗ್ನವಾಗಿತ್ತಲೇ ಇದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದಲ್ಲಿಂದು ಬರೋಬ್ಬರಿ 8793 ಜನರಲ್ಲಿ ಡೆಡ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,20,630 ಕ್ಕೆ ಏರಿಕೆಯಾಗಿದೆ.
ಇನ್ನೂ ಸಮಾಧಾನಕರ ಸಂಗತಿ ಎಂದರೆ ರಾಜ್ಯದಲ್ಲಿ ಇಂದು 7094 ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಆ ರೀತಿ ಚೇತರಿಸಿಕೊಂಡವರ ಸಂಖ್ಯೆ 4,99,506 ಕ್ಕೆ ಏರಿಕೆಯಾಗಿದೆ.
1,11,986 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದೊಂದೆ ದಿನ ಕೊರೊನಾ ಸೋಂಕಿನಿಂದ 125 ಮಂದಿ ಮೃತಪಟ್ಟಿದ್ದು ಸೋಂಕಿನಿಂದ ಸತ್ತವರ ಸಂಖ್ಯೆ 9119 ಕ್ಕೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 4259 ಹೊಸ ಪ್ರಕರಣ ದಾಖಲಾಗಿದ್ದು 47 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
PublicNext
02/10/2020 08:57 pm