ಐಪಿಎಲ್ ಕ್ರಿಕೆಟ್ ಹಂಗಾಮಾ ಅಂತಿಮ ಘಟ್ಟ ತಲುಪಿದೆ.ಇಂದಿನ ಕ್ರಿಕೆಟ್ ಲೀಗ್ ನಲ್ಲಿಂದು ಗೆದ್ದು ಸೋತವರ ನಡುವೆ ನೇರ ಹಣಾಹನಿ
ಅಬುದಾಭಿಯಲ್ಲಿ ನಡೆಯಲಿರುವ 55ನೇ ಲೀಗ್ ಫೈಟ್ನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗ್ತಿವೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಎರಡೂ ತಂಡಗಳಿಗೂ, ಇದು ಡು ಆರ್ ಡೈ ಫೈಟ್. ಕಳೆದ 3 ಪಂದ್ಯಗಳ ಹ್ಯಾಟ್ರಿಕ್ ಸೋಲು, ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಗೆ ತಲೆನೋವಾಗಿದೆ.
ಸೋಲಿನ ಸುಳಿಗೆ ಸಿಲುಕಿರುವ ಆರ್ಸಿಬಿ, ಇಂದಿನ ಪಂದ್ಯವನ್ನ ಗೆಲ್ಲಲೇಬೇಕಿದೆ. ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ಪರಿಸ್ಥಿತಿ ಕೂಡ ಇದೇ. ಗೆಲ್ಲಲೇಬೇಕಾದ ಒತ್ತಡ ಎದುರಿಸುತ್ತಿದೆ.
ಕೊಹ್ಲಿ ಪಡೆ ಸತತ 3 ಪಂದ್ಯಗಳನ್ನ ಸೋತಿದ್ರೆ, ಶ್ರೇಯಸ್ ಪಡೆ ಕಳೆದ 4 ಪಂದ್ಯಗಳಿಂದ ಗೆಲುವನ್ನೇ ಕಂಡಿಲ್ಲ.
ಉಭಯ ತಂಡಗಳ ಪ್ಲೇ ಆಫ್ ಹಂತದ ಕನಸು ನನಸಾಗಬೇಕಂದ್ರೆ, ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ.
PublicNext
02/11/2020 10:13 am