ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ನಿಯಮ ಉಲ್ಲಂಘಿಸಿದ ಆಸ್ಪತ್ರೆಗಳಿಗೆ ನೋಟೀಸ್

ಬೆಂಗಳೂರು: ಕೊರೊನಾ ನಿಯಮ ಪಾಲಿಸದ ಏಳು ಖಾಸಗಿ ಆಸ್ಪತ್ರೆಗಳಿಗೆ ವಿರುದ್ಧ ಬಿಬಿಎಂಪಿ ನೋಟಿಸ್ ನೀಡಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೋಟಿಸ್ ಜಾರಿ ಮಾಡಿದ್ದಾರೆ. ಶೇ.50 ರಷ್ಟು ಕೋವಿಡ್ ಬೆಡ್ ನೀಡದಕ್ಕಾಗಿ ಕಾರಣ ನೀಡುವಂತೆ ಕೋರಿದ್ದಾರೆ. ಕೆಪಿಎಂಇ ಕಾಯ್ದೆ ಅನ್ವಯ ನೋಟಿಸ್ ನೀಡಲಾಗಿದೆ.

ಸರ್ಕಾರ ಸೂಚನೆ ಪಾಲಿಸದ ಹಿನ್ನೆಲೆಯಲ್ಲಿ ಆಸ್ಪತ್ರೆ, ಕೆಂಗೇರಿಯ ಸಂತೋಷ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ, ವರ್ತೂರಿನ ಸಕ್ರಾ ಆಸ್ಪತ್ರೆ ಹಾಗೂ ಓಲ್ಡ್ ಏರ್‍ಪೋರ್ಟ್ ರಸ್ತೆಯಲ್ಲಿನ ಶುಶ್ರೂಷಾ ಆಸ್ಪತ್ರೆ ಮೇಲೆ ಎಫ್‍ಐಆರ್ ದಾಖಲಾಗಿತ್ತು.

ಬಿಬಿಎಂಪಿ ಆಯುಕ್ತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮೂರು ಆಸ್ಪತ್ರೆಗಳ ಮೇಲೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಾಗಿತ್ತು.

ನೋಟಿಸ್ ಪಡೆದಿರುವ ಆಸ್ಪತ್ರೆಗಳು ಮುಂದಿನ 24 ಗಂಟೆಯಲ್ಲಿ ಉತ್ತರಿಸಬೇಕಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಲೈಸನ್ಸ್ ಯಾಕೆ ರದ್ದು ಮಾಡೋದಾಗಿ ಬಿಬಿಎಂಪಿ ಎಚ್ಚರಿಸಿದೆ‌.

ನೋಟಿಸ್‍ನಲ್ಲಿ ಮುಂದಿನ 48 ಗಂಟೆಗಳ ಒಳಗಾಗಿ ಸರ್ಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಬಿಟ್ಟು ಕೊಡಬೇಕು ಎಂದು ಬಿಬಿಎಂಪಿ, ಖಾಸಗಿ ಆಸ್ಪತ್ರೆಗಳಿಗೆ ತಾಕೀತು ಮಾಡಿದೆ.

Edited By : Nagaraj Tulugeri
PublicNext

PublicNext

31/10/2020 04:52 pm

Cinque Terre

36.34 K

Cinque Terre

1