ಬೆಂಗಳೂರು: 2021ರ ಆರಂಭದಲ್ಲೇ ರಾಜ್ಯಕ್ಕೆ ಕೋವಿಡ್-19 ಲಸಿಕೆ ದೊರೆಯುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಮಂಗಳವಾರ ಭರವಸೆ ನೀಡಿದ್ದರು. ಹೀಗಾಗಿ ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ಬಳಕೆಗೆ ಭರ್ಜರಿ ತಯಾರಿ ನಡೆದಿದೆ.
ಕೊರೊನಾ ವ್ಯಾಕ್ಸಿನ್ ಬಳಕೆಗೆ ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಯಾರಿ ನಡೆಸಿದ್ದು, ಸಾಮೂಹಿಕ ಲಸಿಕೆಗೆ ಇರುವ ವ್ಯವಸ್ಥೆ ಬಗ್ಗೆ ಅಂಕಿ-ಅಂಶ ಸಮೇತ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಕೂಡ ನೀಡಿದೆ ಎನ್ನಲಾಗಿದೆ.
ರಾಜ್ಯದಲ್ಲಿ 10 ಬೃಹತ್ ಕೋಲ್ಡ್ ಸ್ಟೋರೇಜ್, 2 ಬೃಹತ್ ಫ್ರೀಜರ್, 3,426 ಕೋಲ್ಡ್ ಬಾಕ್ಸ್, 55,347 ವ್ಯಾಕ್ಸಿನ್ ಕ್ಯಾರಿಯರ್ ಬಾಕ್ಸ್ ಹಾಗೂ 6,144 ಸ್ಟೆಬಿಲೈಜರ್ಸ್ಗಳನ್ನು ಹೊಂದಿರುವುದಾಗಿ ಇಲಾಖೆಯು ವರದಿಯನ್ನು ನೀಡಿದೆ. ಅಲ್ಲದೇ ಒಂದು ಬೃಹತ್ ಕೋಲ್ಡ್ ಸ್ಟೋರೇಜ್ ದುರಸ್ತಿಯಲ್ಲಿರುವುದಾಗಿ, ವ್ಯಾಕ್ಸಿನೇಷನ್ಗಾಗಿಯೇ ಎರಡು ಬೃಹತ್ ಫ್ರೀಜರ್‌ಗಳ ದುರಸ್ತಿ ನಡೆದಿದೆ ಎಂದು ರಾಜ್ಯ ಸರ್ಕಾರ ವರದಿ ನೀಡಿದೆ ಎಂಬ ಮಾಹಿತಿ ಲಭಿಸಿದೆ.
PublicNext
28/10/2020 04:01 pm