ನವದೆಹಲಿ: ಡೆಡ್ಲಿ ಸೋಂಕಿನಿಂದ ಕಂಗೆಟ್ಟ ಜನತೆಗೆ ನೆಮ್ಮದಿಯ ವಿಷಯ ಎಂದೆ ಹೇಳಬಹುದು.
ಸದ್ಯ ದೇಶದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, 24 ಗಂಟೆಗಳಲ್ಲಿ 46,791 ಪ್ರಕರಣಗಳು ಪತ್ತೆಯಾಗಿದೆ.
ಅಲ್ಲದೆ 587 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಒಂದೇ ದಿನ 46,791 ಕೇಸ್ ಪತ್ತೆಯಾಗುವುದರೊಂದಿಗೆ ಪ್ರಸ್ತುತ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75,97,064ಕ್ಕೆ ತಲುಪಿದೆ. ಇದರಂತೆ ಸಾವಿನ ಸಂಖ್ಯೆ ಕೂಡ 1,15,197ಕ್ಕೆ ಏರಿಕೆಯಾಗಿದೆ.
75,97,064 ಒಟ್ಟು ಸೋಂಕಿತರ ಪೈಕಿ ಈ ವರೆಗೂ 67,33,329 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೇಶದಲ್ಲಿನ್ನೂ 7,48,538 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
PublicNext
20/10/2020 11:15 am