ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೂರಾರು ಕೇಸ್‌ಗಳಿದ್ದಾಲೇ ಲಾಕ್​​ಡೌನ್ ​ಘೋಷಿಸಿದ್ದರಿಂದ ಕೊರೊನಾ ನಿಯಂತ್ರಣಕ್ಕೆ ಬಂತು: ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ನೂರಾರು ಸಂಖ್ಯೆಯಲ್ಲಿದ್ದಾಗಲೇ ಲಾಕ್​​ಡೌನ್​ ಘೋಷಿಸಿದ್ದರಿಂದ ಕೊರೊನಾ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ದೇಶದಲ್ಲಿ ಒಳ್ಳೆಯ ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳಿವೆ. ಅವುಗಳೇ ನಮ್ಮ ದೊಡ್ಡ ಆಸ್ತಿ. ಕೊರೊನಾ ಸೋಂಕು ಎದುರಿಸಲು ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಅಮೆರಿಕಗಿಂತ ಭಾರತದಲ್ಲಿ ನಾಲ್ಕುಪಟ್ಟು ಜನರಿದ್ದಾರೆ. ಬೇರೆ ದೊಡ್ಡ ವಿದೇಶಗಳಲ್ಲಿರುವಷ್ಟು ಜನರು ಭಾರತದ ಕೆಲವು ರಾಜ್ಯಗಳಲ್ಲೇ ಇದ್ದಾರೆ. ಆದಾಗ್ಯೂ ಭಾರತ ಕೊರೊನಾ ಪಿಡುಗನ್ನು ಸಮರ್ಥವಾಗಿ ಎದುರಿಸಿದ್ದು, ನಮ್ಮಲ್ಲಿ ಕೋವಿಡ್​ ಸಾವಿನ ಪ್ರಮಾಣ ತೀರಾ ಕಡಿಮೆ ಇದೆ ಎಂದು ಹೇಳಿದರು.

ಕಳೆದ ಕೆಲ ದಿನಗಳಿಂದ ಒಂದು ದಿನದಲ್ಲಿ ಕೊರೊನಾದಿಂದ ಸಂಭವಿಸುವ ಸಾವು ಹಾಗೂ ಹೊಸ ಕೇಸ್​ಗಳ ಪ್ರಮಾಣ ಕಡಿಮೆಯಾಗಿದೆ. ಅತ್ಯಧಿಕ ಅಂದರೆ ಶೇ. 88 ಚೇತರಿಕೆ ಪ್ರಮಾಣವನ್ನು ಭಾರತ ಹೊಂದಿದೆ. ಆರಂಭದಲ್ಲಿ ಪ್ರಕರಣಗಳ ಸಂಖ್ಯೆ ನೂರಾರು ಇದ್ದಾಗಲೇ ಲಾಕ್​ಡೌನ್​ ಘೋಷಿಸಿದ್ದು, ಮಾಸ್ಕ್​ ಬಳಕೆ ಹಾಗೂ ರ‍್ಯಾಪಿಡ್ ಆ್ಯಂಟಿಜನ್​ ಪರೀಕ್ಷೆಯನ್ನೂ ಬೇಗ ಅಳವಡಿಸಿಕೊಂಡಿದ್ದರಿಂದ ಇವೆಲ್ಲ ಸಾಧ್ಯವಾಯಿತು ಎಂದು ಮೋದಿ ತಿಳಿಸಿದರು.

Edited By : Vijay Kumar
PublicNext

PublicNext

19/10/2020 11:48 pm

Cinque Terre

33.96 K

Cinque Terre

7