ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

DCM ಕಾರಜೋಳ ಪುತ್ರನ ಆರೋಗ್ಯ ಸ್ಥಿತಿ ಗಂಭೀರ ; ಚೆನ್ನೈಗೆ ಏರ್ ಲಿಫ್ಟ್

ಬೆಂಗಳೂರು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಪುತ್ರ ಡಾ.ಗೋಪಾಲ ಕಾರಜೋಳ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಈ ಹಿನ್ನೆಲೆ ಮಗನಿಗೆ ಚೆನ್ನೈನಲ್ಲಿ ಟ್ರೀಟ್ಮೆಂಟ್ ಕೊಡಿಸಲು ಕಾರಜೋಳ ಮುಂದಾಗಿದ್ದಾರೆ.

ಸದ್ಯ ಗೋಪಾಲ ಕಾರಜೋಳರನ್ನ ಏರ್ ಲಿಫ್ಟ್ ಮಾಡುವ ಮೂಲಕ ಚೆನ್ನೆಗೆ ಕರೆದೊಯ್ಯಲಾಗಿದೆ.

ಕಳೆದ 20 ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಗೋಪಾಲ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ವೆಂಟಿಲೇಟರ್ ನ ಸಹಾಯದಿಂದ ಚಿಕಿತ್ಸೆ ನೀಡಿದ್ರೂ ಅವರು ಗುಣಮುಖರಾಗಿಲ್ಲ.

ಹೀಗಾಗಿ ವೈದ್ಯರ ಸಲಹೆಯಂತೆ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಇಂದು ನೇರವಾಗಿ ಏರ್ ಲಿಫ್ಟ್ ಮಾಡಿ ಚೆನ್ನೈಗೆ ಕರೆದೊಯ್ಯಲಾಗಿದೆ.

Edited By : Nirmala Aralikatti
PublicNext

PublicNext

18/10/2020 06:05 pm

Cinque Terre

103.83 K

Cinque Terre

21