ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ.
ಒಂದು ಬರೋಬ್ಬರಿ 9265 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 7,35,371 ಕ್ಕೆ ಏರಿಕೆಯಾಗಿದೆ.
ಇನ್ನೂ ಸೋಂಕಿತರೊಂದಿಗೆ ಸುಧಾರಿಸಿಕೊಳ್ಳುವವರ ಸಂಖ್ಯೆಯು ಹೆಚ್ಚಿದ್ದು ಇಂದು 8662 ಮಂದಿ ಡೆಡ್ಲಿ ಕೈಯಿಂದ ಬಚ್ಚಾವ್ ಆಗಿ ಮನೆಗೆ ಮರಳಿದ್ದಾರೆ.
ಇದರೊಂದಿಗೆ ಸೋಂಕಿನಿಂದ ಸುಧಾರಿಸಿಕೊಂಡವರ ಸಂಖ್ಯೆ 611167 ಕ್ಕೆ ಏರಿಕೆಯಾಗಿದೆ.
ಡೆಡ್ಲಿ ಸೋಂಕಿಗಿಂದು 75 ಜನ ಉಸಿರು ಚಲ್ಲಿದ್ದಾರೆ. ಆ ಮೂಲಕ ಸಾವನಪ್ಪಿದವರ ಸಂಖ್ಯೆ 10198 ಕ್ಕೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿಂದು 4574 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು 27 ಮಂದಿ ಸಾವನ್ನಪ್ಪಿದ್ದಾರೆ.
PublicNext
14/10/2020 08:41 pm