ಬೆಂಗಳೂರು: ಹೆಮ್ಮಾರಿ ಕೊರೊನಾದ ವಿರುದ್ಧ ಹೋರಾಡಿ ಗೆದ್ದ ಮೇಲೆ ದೃಷ್ಟಿ ದೋಷ ಉಂಟಾಗುತ್ತದೆ ಎಂಬ ಆಘಾತಕಾರಿ ಮಾಹಿತಿ ಕೇಳಿಬಂದಿದೆ.
ಹೌದು. ಕೊರೊನಾ ವೈರಸ್ನಿಂದ ಕಣ್ಣಿನ ರಕ್ತನಾಳಗಳು ಬ್ಲಾಕ್ ಆಗಿ, ಸೋರಿಕೆಯಾಗುತ್ತದೆ. ಪರಿಣಾಮ ಆರ್ಟರಿಸ್ ಭಾಗದಲ್ಲಿ ರಕ್ತ ಬ್ಲಾಕ್ ಆದರೆ ದೃಷ್ಟಿ ಕಳೆದುಕೊಳ್ಳುವ ಆತಂಕವಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸೋಂಕಿತರ ಕಣ್ಣುಗಳ ಅಧ್ಯಯನವು 'ಕೊರೊನಾ ಪೀಡಿತರ ಕಣ್ಣಿನ ರಕ್ತನಾಳಗಳು ಹೆಪ್ಪುಗಟ್ಟುತ್ತಿವೆ' ಎಂದು ತಿಳಿಸಿದೆ. ಮಿಂಟೋ, ನಾರಾಯಣ ಕಣ್ಣಿನ ಆಸ್ಪತ್ರೆಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. 130 ಮಂದಿ ಕೊರೊನಾ ಸೋಂಕಿತರ ಕಣ್ಣಿನ ಅಧ್ಯಯನದ ವೇಳೆ ಈ ಅಂಶ ಬಹಿರಂಗಗೊಂಡಿದೆ.
PublicNext
10/10/2020 03:45 pm