ಕೊಲ್ಕತ್ತಾ : ಕೊರೊನಾ ಸೋಂಕು ದಿನದಿಂದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನ ಭಯದಲ್ಲಿಯೇ ದಿನಗಳಿಯುತ್ತಿದ್ದಾರೆ.
ಇನ್ನೂ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜನ ನಾನಾ ದಾರಿಗಳನ್ನು ಹುಡುಕುತ್ತಿದ್ದಾರೆ.
ಸದ್ಯ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಡ್ರ್ಯಾಗನ್ ಫ್ರೂಟ್ ಮಾರು ಹೋಗಿದ್ದಾರೆ.
ಹೌದು, ಕಳೆದ ಕೆಲವು ವರ್ಷಗಳ ಹಿಂದೆ ದೇಶಕ್ಕೆ ಕಾಲಿಟ್ಟ ಈ ಸ್ಪೆಷಲ್ ಹಣ್ಣು ಇದೀಗ ಬಹುಬೇಡಿಕೆಯಲ್ಲಿದೆ.
ಅದರಲ್ಲೂ ಕೊರೊನಾ ಬಂದ ಮೇಲಂತೂ ಇದರ ಬೆಲೆ ಗಗನಕ್ಕೇರಿದೆ. ಕೆ.ಜಿ. ಗೆ 400 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಈ ಹಣ್ಣಿನ ವಿಶೇಷತೆ ಅಂದ್ರೆ ಡ್ರ್ಯಾಗನ್ ಫ್ರೂಟ್ ನಲ್ಲಿ ಉರಿ ಹೊನ್ನು (ಮ್ಯಾಗ್ನೀಷಿಯಂ) ಮತ್ತು ವಿಟಮಿನ್ ಸಿ ಸೇರಿದಂತೆ ಹಲವಾರು ಬೇರೆ ಬೇರೆ ಪೋಷಕಾಂಶಗಳಿವೆ.
ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾ ಸೋಂಕು ತಗುಲದಂತೆ ಸಹಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಹಾಗಾಗಿ ಈ ಹಣ್ಣಿಗೆ ಸಾಕಷ್ಟು ಬೇಡಿಕೆ ಬಂದಿದ್ದು ಪಶ್ಚಿಮ ಬಂಗಾಳದ ಸಿಲಿಗುರಿ ಪ್ರಾಂತ್ಯದ ರೈತರು ಇದನ್ನು ಬೆಳೆಯಲು ಮುಂದಾಗಿದ್ದಾರೆ.
ಇದಕ್ಕೆ ಪೂರಕವಾಗಿ ಸ್ಥಳೀಯ ಕೃಷಿ ವಿದ್ಯಾಯಲಗಳ ಸಹ ರೈತರಿಗೆ ತರಬೇತಿ ನೀಡಲು ಮುಂದಾಗಿದೆ.
PublicNext
08/10/2020 02:31 pm