ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಸಿಎಂ ತವರಲ್ಲಿ ನಡೆಯಬೇಕಿದ್ದ ಸಾಹಿತ್ಯ ಸಮೇಳನಕ್ಕೆ ಮತ್ತೊಂದು ನಿರ್ಧಾರ: ದಿನಕ್ಕೊಂದು ಬಣ್ಣ ಕ್ಷಣಕ್ಕೊಂದು ಮಾತು...!

ಹಾವೇರಿ: ಅದು ಸಿಎಂ ಬೊಮ್ಮಾಯಿಯವರ ತವರು ಕ್ಷೇತ್ರ. ಆ ಕ್ಷೇತ್ರದಲ್ಲಿ ಈ ಬಾರಿ ಅದ್ಧೂರಿಯಾಗಿ ಸಾಹಿತ್ಯದ ಹಬ್ಬವೊಂದು ಅದ್ದೂರಿಯಾಗಿ ನಡೆಯಬೇಕಿತ್ತು. ಆದರೆ ಇದುವರೆಗೂ ಸಿದ್ಧತೆಯ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಅಲ್ಲದೇ ಈಗ ರಾಜ್ಯ ಸರ್ಕಾರ ಮತ್ತೊಂದು ನಿರ್ಧಾರದ ಮೂಲಕ ಜನರ ಆಸೆಯನ್ನು ನಿರಾಸೆ ಮಾಡುವಂತೆ ಮಾಡಿದ್ದಾರೆ. ಅಷ್ಟಕ್ಕೂ ಯಾವುದು ಆ ಹಬ್ಬ..? ಜನರ ಆತಂಕವಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...

ಸರ್ವಜ್ಞನ ನಾಡು ಯಾಲಕ್ಕಿ ಕಂಪಿನ ಬೀಡು ಎಂದು ಖ್ಯಾತಿ ಪಡೆದ ಹಾವೇರಿಯಲ್ಲಿ ನ. 11ರಿಂದ 13ರವರೆಗೆ ಅದ್ಧೂರಿಯಾಗಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರಾದರೂ ಈವರೆಗೆ ಯಾವುದೇ ಅಗತ್ಯ ತಯಾರಿ ನಡೆದಿಲ್ಲ. ಹೀಗಾಗಿ ನಿಗದಿತ ದಿನಾಂಕದಂದು ಸಮ್ಮೇಳನ ನಡೆಯುವುದೇ...? ಎಂಬ ಅನುಮಾನ ದಟ್ಟವಾಗಿತ್ತು. ಆದರೇ ಈಗ ರಾಜ್ಯ ಸರ್ಕಾರ ಮತ್ತೇ ಸಾಹಿತ್ಯ ಸಮ್ಮೇಳನವನ್ನು ಮುಂದೂಡಿದ್ದು, ಜನವರಿ 6,7 ಮತ್ತು 8ರಂದು ಮಾಡಲು ತೀರ್ಮಾನ ಕೈಗೊಂಡಿರುವುದು ಚಾತಕ ಪಕ್ಷಿಯಂತೆ ಕಾಯುತ್ತಿದ್ದವರಲ್ಲಿ ನಿರಾಶೆ ಭಾವವನ್ನು ಹುಟ್ಟು ಹಾಕಿದೆ.

ನವೆಂಬರ್‌ನಲ್ಲಿ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಹೇಶ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ನಿಗದಿತ ದಿನಾಂಕದಂದು ಸಮ್ಮೇಳನ ನಡೆಸುವುದಾಗಿ ಸಿಎಂ ಹೇಳಿಕೊಂಡಿದ್ದರು. ಈ ಮಧ್ಯೆ ಜಿಲ್ಲೆಯಲ್ಲಿ ಈಗ ಮತ್ತೆ ವರುಣನ ಅಬ್ಬರ ಶುರುವಾಗಿದೆ. ಹೀಗಾಗಿ ಸಮ್ಮೇಳನದ ದಿನಾಂಕ ಸರ್ಕಾರ ಮುಂದುಡಿದೆ.

ಇನ್ನೂ ಸಮ್ಮೇಳನದ ಸಿದ್ಧತೆಗೆ ಕನಿಷ್ಠ ಎರಡು ತಿಂಗಳು ಸಮಯ ಅವಕಾಶ ಬೇಕು. ಅನುದಾನ ಬಿಡುಗಡೆ ಆಗಬೇಕು. ಸ್ವಾಗತ ಸಮಿತಿ ಸೇರಿ 20 ಸಮಿತಿಗಳು ಕಾರ್ಯಾರಂಭಿಸಬೇಕು. ಈಗಾಗಲೇ ಸಮ್ಮೇಳನದ ಸ್ವಾಗತ ಸಮಿತಿ ರಚನೆಯಾಗಿದ್ದರೂ ಕೆಲಸ ಶುರುವಾಗಿರಲಿಲ್ಲ. ಸಮ್ಮೇಳನ ನಡೆಸಲು ತೀರ್ಮಾನಿಸಿರುವ ಇಜಾರಿ ಲಕಮಾಪುರದ ಜಿಎಚ್ ಕಾಲೇಜು ಬಳಿಯ 25 ಎಕರೆ ಜಾಗ ಹದಗೊಳಿಸುವ ಕಾರ್ಯಕ್ಕೆ ಕನಿಷ್ಠ 20ರಿಂದ 30 ದಿನ ಬೇಕು. 19 ಎಕರೆ ವಿಸ್ತಾರದ ಮೈದಾನ ಸದ್ಯ, ಕೆಸರಿನಿಂದ ಕೂಡಿದೆ. ಉಳಿದ ಐದು ಎಕರೆ ಹೊಲ ಸಮ್ಮೇಳನಕ್ಕೆ ನೀಡಲು ಹೊಲದ ಮಾಲೀಕರು ಒಪ್ಪಿಕೊಂಡಿದ್ದಾರಾದರೂ, ಅಲ್ಲಿ ಬಿತ್ತನೆ ಮಾಡಲಾಗಿದೆ. ಬೆಳೆ, ಕಳೆ ತೆಗೆದು ಸ್ವಚ್ಛಗೊಳಿಸಲು ಕನಿಷ್ಠ 20 ದಿನಗಳಾದರೂ ಬೇಕು.

ಉಳಿದಂತೆ ತಿಂಗಳ ಮುಂಚೆಯೇ ಅತಿಥಿಗಳು, ಗಣ್ಯರು ಸೇರಿ 3 ಲಕ್ಷಕ್ಕೂ ಅಧಿಕ ಕಸಾಪ ಸದಸ್ಯರಿಗೆ ಆಹ್ವಾನ ಪತ್ರಿಕೆ ಕಳುಹಿಸಬೇಕು. ಊಟ, ವಸತಿಯ ವ್ಯವಸ್ಥೆಯಾಗಬೇಕು. ನಗರದ ರಸ್ತೆಗಳನ್ನು ದುರಸ್ತಿಪಡಿಸಬೇಕು. ಇಂತಹ ಹಲವು ಕೆಲಸಗಳು ಬಾಕಿ ಇವೆ. ಹಾಗಾಗಿ, ಸಾಹಿತ್ಯ ಪ್ರೇಮಿಗಳಲ್ಲಿ ಗೊಂದಲ ಉಂಟಾಗಿತ್ತು. ಈಗ ಸರ್ಕಾರ ದಿನಾಂಕ ಮುಂದೂಡಿ ನಿರಾಶೆ ಭಾವವನ್ನು ಹುಟ್ಟು ಹಾಕಿದೆ.

Edited By : Manjunath H D
PublicNext

PublicNext

12/10/2022 09:31 pm

Cinque Terre

33 K

Cinque Terre

0

ಸಂಬಂಧಿತ ಸುದ್ದಿ