ಹಾಸನ: ಹಾಸನದ ಹಾಸನಾಂಬ ದೇಗುಲದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ದೇವಾಲಯದ ಎಕ್ಸಿಟ್ ಗೇಟ್ ಬಳಿ ಸಿಬ್ಬಂದಿ ಹೊಡೆದಾಡಿಕೊಂಡಿದ್ದಾರೆ. ದೇವಾಲಯಕ್ಕೆ ಕರೆದುಕೊಂಡು ಹೋಗುವ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ.
ಕಂದಾಯ ಇಲಾಖೆ ಸಿಬ್ಬಂದಿ ಕುಟುಂಬದವರನ್ನು ಹಾಸನಾಂಬೆ ದರ್ಶನಕ್ಕೆ ಕರೆತಂದಿದ್ದರು. ಅವರನ್ನು ಮತ್ತೊಬ್ಬ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಸ್ಪರ ಬಡಿದಾಟ ನಡೆದಿದೆ. ಈ ವೇಳೆ ಪೊಲೀಸರು ಹರಸಾಹಸ ಪಟ್ಟು ಜಗಳ ಬಿಡಿಸಲು ಮುಂದಾಗಿದ್ದಾರೆ.
PublicNext
31/10/2024 06:43 pm