ಹಾಸನ: ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ನಿಭಾಯಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿದ್ದಾರೆ.
ಹಾಸನಾಂಬೆ ದೇವಿ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಅವರು ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೂರು ಲಕ್ಷದಷ್ಟು ವಿವಿಐಪಿ ಪಾಸ್‌ಗಳನ್ನು ಹಂಚಿದ್ದಾರೆ. ಡಿಸಿ, ಎಸ್ಪಿ, ಸಿಇಓ ಕಾರಿನಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಏಜೆಂಟರ್, ಕಾಂಗ್ರೆಸ್ ಲೀಡರ್‌ಗಳು ಬಂದು ದರ್ಶನ ಮಾಡಿಕೊಂಡು ಹೋಗುತ್ತಿದ್ದಾರೆ. ರೌಡಿಗಳು, ಪರೋಡಿಗಳಿಗೂ ವಿವಿಐಪಿ ಹೆಸರಿನಲ್ಲಿ ದೇವಿ ದರ್ಶನ ಮಾಡಿಸುತ್ತಿದ್ದಾರೆ ಎಂದು ದೂರಿದರು.
ಸಾವಿರಾರು ರೂಪಾಯಿ ಹಾರ, ಶಾಲು ಹಾಕಿ ಸನ್ಮಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು, ಮುಖ್ಯಕಾರ್ಯದರ್ಶಿಗಳು, ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ರೆವಿನ್ಯೂ ಇಲಾಖೆ ಮಾಡುತ್ತಿರುವ ಭ್ರಷ್ಟಾಚಾರ, ದುರ್ನಡತೆ ಖಂಡಿಸುವಲ್ಲಿ ಎಸ್ಪಿ ವಿಫಲರಾಗಿದ್ದಾರೆ ಎಂದರು.
ಕೂಡಲೇ ಜಿಲ್ಲಾಧಿಕಾರಿ, ಎಸಿ, ಸಿಇಓ ಅವರನ್ನು ಅಮಾನತು ಮಾಡುಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಎಂದರು.
PublicNext
02/11/2024 04:09 pm