ಹಾಸನ : ಹಾಸನ ಜಿಲ್ಲಾಧಿಕಾರಿ ವಿರುದ್ಧ ಬೇಲೂರು ಶಾಸಕ ಎಚ್.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ಜಾತ್ರಾ ಮಹೋತ್ಸವವನ್ನು ಹಲವಾರು ಜಿಲ್ಲಾಧಿಕಾರಿಗಳು ಮಾಡಿದ್ದಾರೆ. ಇಡೀ ಹಾಸನದ ಜನತೆ ಒಂದು ವರ್ಷದಿಂದ ದೇವಿ ದರ್ಶನ ಮಾಡಲು ಕಾಯುತ್ತಿದ್ದಾರೆ. ಆದರೆ ಹಾಸನ ಜಿಲ್ಲೆಯ ಜನರ ದುರಾದೃಷ್ಟ ಎಂದರೆ,ಬರುವ ಭಕ್ತರಿಗೆ ಸರಿಯಾದ ಸಮಯಕ್ಕೆ, ಸರಿಯಾದ ರೀತಿ ದೇವಿ ದರ್ಶನ ಆಗುತ್ತಿಲ್ಲ, ಹಾಸನ ಜಿಲ್ಲೆಯವರಿಗೆ ದರ್ಶನ ಸಿಗುತ್ತಿಲ್ಲ, ಜಿಲ್ಲಾಧಿಕಾರಿ ನಡೆ ಹಾಸನ ಜಿಲ್ಲೆಗೆ ಕಪ್ಪು ಚುಕ್ಕೆಯಾಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಸನಾಂಬೆ ಜಾತ್ರಾ ಮಹೋತ್ಸವವನ್ನು ವೈಯುಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರ ನಿರ್ದೇಶನ ಕೊಡಬೇಕಿತ್ತು. ಪೊಲೀಸ್ ಇಲಾಖೆ, ಪೌರಕಾರ್ಮಿಕರನ್ನು ಬದಿಗೊತ್ತಿ ಅವರ ವ್ಯಕ್ತಿತ್ವವನ್ನು ವೈಭವೀಕರಣ ಮಾಡಿಕೊಳ್ಳಲು ಹೋಗಿ ಹಾಸನ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಯಾವ ವರ್ಷವೂ ಈ ರೀತಿ ಆಗಿಲ್ಲ. ದೊಂಬರಾಟ ಮಾಡಲು ಹೋಗಿ ಭಕ್ತರಿಗೆ ದೇವಿ ದರ್ಶನ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
PublicNext
02/11/2024 03:27 pm