ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ನವರಾತ್ರಿ ಸಂಭ್ರಮ ದಾಂಡಿಯಾ ಮ್ಯೂಸಿಕ್ ಗೆ ಸಖತ್ ಸ್ಟೆಪ್ಸ್ ಹಾಕಿದ ನಾರಿಯರು

ಕಲಬುರಗಿ: ಗಣೇಶೋತ್ಸವದ ಬಳಿಕೆ ಕಲಬುರಗಿಯಲ್ಲಿ ನವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ದಾಂಡಿಯಾ ನೃತ್ಯಕ್ಕೆ ಸಖತ್ ಸ್ಟೆಪ್ ಹಾಕುವ ಮೂಲಕ‌ ನಾರಿಯರು ನವರಾತ್ರಿಯನ್ನು ಸಂಭ್ರಮಿಸುತ್ತಿದರು.

ದಸರಾ ಅಂದ್ರೆ ದಾಂಡಿಯಾ ದಾಂಡಿಯಾ ಅಂದ್ರೆ ಸಂಗೀತ. ಹೌದು, ಎಲ್ಲೆಡೆ ಈಗ ನವರಾತ್ರಿ ಸಡಗರ. ಅದರಂತೆ ಕಲಬುರಗಿಯಲ್ಲಿ ನವರಾತ್ರಿ ಅಂಗವಾಗಿ ನಡೆದ ದಾಂಡಿಯಾ ಭರ್ಜರಿಯಾಗಿತ್ತು. ಕಲರಫುಲ್ ಡ್ರೆಸ್ ಮಾಡಿಕೊಂಡ ಯುವತಿಯರ ದಂಡು ದಾಂಡಿಯಾ ಮ್ಯೂಸಿಕ್ ಗೆ ಸ್ಟೆಪ್ಸ್ ಹಾಕಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಜೇವರ್ಗಿ ಕಾಲೋನಿ ಸಾಂಸ್ಕೃತಿಕ ಬಳಗದಿಂದ ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ನಡೆದ ದಾಂಡಿಯಾ ನೈಟ್ ಹಲವಾರು ನೃತ್ಯಪಟುಗಳಿಗೆ ವೇದಿಕೆಯಾಗಿತ್ತು.

ಅದರಲ್ಲೂ ಡೊಲತಾರೋ ಡೋಲು ಬಾಜೆ ಹಾಡಂತೂ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತ್ತು. ದಾಂಡಿಯಾ ನಡುವೆ ಕಲಾವಿದರಾದ ಗೋಪಿ ಕುಲಕರ್ಣಿ ಮತ್ತು ಸ್ವಾತಿ ಜೋಶಿ ಜೊತೆಜೊತೆಯಲಿ ಅನ್ನೋ ಹಾಡು ಹಾಡಿ ಸಂಗೀತದ ರಸದೌತಣ ನೀಡಿದ್ದು ವಿಶೇಷವಾಗಿತ್ತು. ಇನ್ನು ನಗರದ ಜಸ್ಟ್ ಕ್ಲಬ್, ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದ ದಾಂಡಿಯಾ ನೈಟ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.

Edited By : Shivu K
PublicNext

PublicNext

03/10/2022 10:26 am

Cinque Terre

17.93 K

Cinque Terre

0