ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಸುಳ್ಳು ಮಾಹಿತಿ ನೀಡಿ ಲೇಬರ್ ಕಾರ್ಡ್ ಪಡೆದರೆ ಎಫ್ಐಆರ್

ಕಲಬುರಗಿ:ಕಟ್ಟಡ ಕಾರ್ಮಿಕ ಕಾರ್ಡ್ ಪಡೆದವರು ವರ್ಷದಲ್ಲಿ ಕನಿಷ್ಟ 90 ದಿನಗಳನ್ನು ಈ ವೃತ್ತಿಯಲ್ಲಿ ತೊಡಗಿಕೊಳ್ಳುವುದು ಕಡ್ಡಾಯ. ಸುಳ್ಳು ಮಾಹಿತಿ ನೀಡಿ ನಿರ್ಮಾಣ ವೃತ್ತಿಯಲ್ಲಿ ತೊಡಗದವರು ಲೇಬರ್ ಕಾರ್ಡ್ ಪಡೆದಿದ್ದಲ್ಲಿ ಅಂತಹವರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಮದುವೆ-ಶೈಕ್ಷಣಿಕ ಸಹಾಯ ಧನ ಸೇರಿದಂತೆ ಇನ್ನಿತರ ಹಲವಾರು ಕಲ್ಯಾಣ ಕಾರ್ಯಕ್ರಮಗಳು ಲೇಬರ್ ಕಾರ್ಡ್ ಮೂಲಕ ನೀಡಲಾಗುತ್ತಿದೆ. ಇದೀಗ ಹೊಸದಾಗಿ 45 ಕಿ.ಮೀ. ಅಂತರದೊಳಗಿನ ಪ್ರಯಾಣಕ್ಕೆ ಉಚಿತ್ ಬಸ್ ಪಾಸ್ ಸಹ ನೀಡಲಾಗುತ್ತಿದೆ. ಕೆಲವರು ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆಯುತ್ತಿದ್ದಾರೆ. ತಪ್ಪು ಮಾಹಿತಿ ನೀಡಿ ಕಾರ್ಡ ಪಡೆದಿದ್ದಲ್ಲಿ ಕೂಡಲೆ ಇಲಾಖೆಗೆ ಹಿಂದಿರುಗಿಸಬೇಕು. ನಿಜವಾದ ಫಲಾನುಭವಿಗಳು ಇದರ ಪ್ರಯೋಜನೆ ಪಡೆಯಬೇಕು. ಇನ್ನೂ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿಂಚಣಿ) ಯೋಜನೆಯಡಿ 18-40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಮಾಸಿಕ 55 ರಿಂದ 200 ರೂ. ವರೆಗೆ ವಂತಿಗೆ ಪಾವತಿಸಿದಲ್ಲಿ 60 ವರ್ಷದ ನಂತರ ಸಂಧ್ಯಾಕಾಲದಲ್ಲಿ ಮಾಸಿಕ 3,000 ರೂ. ನಿಶ್ಚಿತ ಪಿಂಚಣಿ ಪಡೆಯಬಹುದಾಗಿದೆ ಎಂದರು.

Edited By : Nagaraj Tulugeri
PublicNext

PublicNext

13/10/2022 06:27 pm

Cinque Terre

17.78 K

Cinque Terre

0