ಕಲಬುರಗಿ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಡಚರ್ಲಾ ಗ್ರಾಮದಲ್ಲಿ ಸಿಡಿಲು ಬಡಿದು ತಂದೆ ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೂಲಿ ಕೆಲಸವೆಂದು ಕಡಚರ್ಲಾ ಗ್ರಾಮಕ್ಕೆ ಹೋಗಿದ್ದು ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಏಕಾಏಕಿಯಾಗಿ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಅಪ್ಪ ಮಗ ಸಾವನ್ನಪ್ಪಿದ್ದಾರೆ.
ತುಳಚಾ ನಾಯಕ ರಾಠೋಡ್ (40) ಅವೀನ್ ರಾಠೋಡ್ (16) ಮೃತರು ಎಂದು ತಿಳಿದು ಬಂದಿದೆ.ಮೃತರು ಸೇಡಂ ತಾಲೂಕಿನ ಪಿಲ್ಲಿಗುಂಟಾ ತಾಂಡಾದ ನಿವಾಸಿಗಳು ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ಮುದೋಳ್ ಪೊಲೀಸ್ ಠಾಣಾ ಸಿಬ್ಬಂದಿ ಆಗಮಿಸಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
13/10/2022 12:27 pm