ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಸರಣಿ ಅಪಘಾತ ನಾಲ್ವರು ಸಾವು ನಾಲ್ವರಿಗೆ ಗಂಭೀರ ಗಾಯ

ಕಲಬುರಗಿ : ಲಾರಿ,ಬೈಕ್,ಕಾರು ನಡುವೆ ಸರಣಿ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟು ಇನ್ನು ನಾಲ್ವರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹಸನಪುರ ಕ್ರಾಸ್ ಬಳಿ ನಡೆದಿದೆ.

ವಿಜಯಪುರದಿಂದ ಕಲಬುರಗಿ ಚಿತ್ತಾಪುರ ಕಡೆಗೆ ಹೊರಟಿದ್ದ ಬೈಕ್, ಚಾಲಕನ ನಿಯಂತ್ರಣ ತಪ್ಪಿ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆಯಲಾಗಿದೆ. ಬೈಕ್ ಲಾರಿಯ ಚಕ್ರದಡಿ ಸಿಲುಕಿದ್ದು ಗಮನಿಸಿದ ಲಾರಿ ಚಾಲಕ ಏಕಾಏಕಿಯಾಗಿ ಬ್ರೇಕ್ ಹಾಕಲಾಗಿದೆ, ಹಿಂದಿನಿಂದ ವೇಗವಾಗಿ ಬರುತ್ತಿದ ಕಾರು ನಿಯಂತ್ರಣ ತಪ್ಪಿ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ ಮುಜಾಹಿದ್.ಹುಸೇನ್ ಬಿ, ಮೌಲಾಬಿ ಹಾಗೂ ಬೈಕ್ ಸವಾರ ರಾಘವೇಂದ್ರ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಗಾಯಗೊಂಡಿರುವ ನಾಲ್ವರಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ‌ ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಭೇಟಿ ನೀಡಿ ಪರಿಶೀಲಿಸಲಾಗಿದೆ.ಈ ಕುರಿತು ಟ್ರಾಫಿಕ್ 1 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

17/10/2024 09:33 am

Cinque Terre

5.5 K

Cinque Terre

0