ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ವಾಯುಪಡೆ ಹೊಸ ಸಮವಸ್ತ್ರ ಅನಾವರಣ

ಚಂಡೀಗಢ: ಭಾರತೀಯ ವಾಯುಪಡೆಯ ದಿನದಂದು ಭಾರತೀಯ ವಾಯುಪಡೆ ತಮ್ಮ ಸಿಬ್ಬಂದಿಗಾಗಿ ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಿದೆ.ಚಂಡೀಗಢದಲ್ಲಿ ನಡೆದ ವಾಯುಪಡೆಯ 90ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಡಿಜಿಟಲ್ ಪ್ರಿಂಟ್ ಇರುವ ಸಮವಸ್ತ್ರವನ್ನು ಲೋಕಾರ್ಪಣೆಗೊಳಿಸಿದರು.

ವಾಯುಪಡೆಯ ವಾರ್ಷಿಕೋತ್ಸವವನ್ನು ದೆಹಲಿಯ ಹೊರಗೆ ನಡೆಸುತ್ತಿರುವುದು ಇದೇ ಮೊದಲು. ವರ್ಷದ ಆರಂಭದಲ್ಲಿ ಭಾರತೀಯ ಸೇನೆ ತನ್ನ ನೂತನ ಸಮವಸ್ತ್ರವನ್ನು ಸೈನಿಕರಿಗೆ ನೀಡಿತ್ತು. ಇದೀಗ ವಾಯುಸೇನೆ ಹೊಸ ಸಮವಸ್ತ್ರವನ್ನು ಸೈನಿಕರಿಗೆ ನೀಡಿದೆ. ಹೊಸ ಸಮವಸ್ತ್ರವು ಹಿಂದಿನ ಸಮವಸ್ತ್ರಕ್ಕಿಂತ ವಿಭಿನ್ನವಾಗಿದ್ದು, ಹೊಸ ಮಾದರಿಯ ವಿನ್ಯಾಸ ಬಳಸಲಾಗಿದೆ.

ಹೊಸ ಸಮವಸ್ತ್ರವು ಅದರ ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿದೆ, ಹಳೆಯ ಮಾದರಿಗಳನ್ನು ಪಿಕ್ಸಲೇಟೆಡ್ ವಿನ್ಯಾಸಗಳೊಂದಿಗೆ ಬದಲಾಯಿಸಲಾಗಿದೆ.

Edited By : Nirmala Aralikatti
PublicNext

PublicNext

08/10/2022 10:45 pm

Cinque Terre

98.07 K

Cinque Terre

3