ಬಾಗಲಕೋಟೆ : ಪ್ರವಾಸಿ ತಾಣ ಪಟ್ಟದಕಲ್ಲಿನಲ್ಲಿ 'ಸ್ವಚ್ಛತಾ ಪಕ್ವಾಡ-2022ರ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಬಾಗಲಕೋಟೆ, ಕೇಂದ್ರ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ (ಭಾರತ ಸರ್ಕಾರ) ಬೆಂಗಳೂರು ವಿಭಾಗ, ಪಟ್ಟದಕಲ್ಲು ಗ್ರಾಮ ಪಂಚಾಯತ್ ಮತ್ತು ಸ.ಪ.ಪೂ.ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಪಟ್ಟದಕಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷರು ಚಾಲನೆ ನೀಡಿದರು.
ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಪ್ರವಾಸಿ ಮಾರ್ಗದರ್ಶಿಗಳು, ವಿದ್ಯಾರ್ಥಿಗಳು ಸೇರಿ ಸ್ವಚ್ಛತಾ ಪ್ರತಿಜ್ಞೆಯನ್ನು ಕೈಗೊಂಡು,ನಂತರ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಮಂತ್ರಾಲಯ ಬೆಂಗಳೂರು ವಿಭಾಗದ ವತಿಯಿಂದ ನೀಡಿದ ಡಸ್ಟಬಿನ್ಸ್ ಗಳನ್ನು ಉಪವಿಭಾಗಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಶ್ವೇತಾ ಬೀಡಿಕರ, ಪುರಾತತ್ವ ಇಲಾಖೆ ಅಧಿಕಾರಿ ರವರಿಗೆ ಹಸ್ತಾಂತರಿಸಿದರು.
PublicNext
23/09/2022 07:17 pm