ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಯ ರಾಜ​ಪಥಕ್ಕೆ, ಸೆಂಟ್ರಲ್ ವಿಸ್ಟಾ ಪ್ರದೇಶಕ್ಕೆ 'ಕರ್ತವ್ಯ ಪಥ್' ಎಂದು ಮರುನಾಮಕರಣ​

ನವದೆಹಲಿ: ರಾಷ್ಟ್ರ ರಾಜಧಾನಿ ಐತಿಹಾಸಿಕ ರಾಜಪಥ ಹಾಗೂ ಸೆಂಟ್ರಲ್ ವಿಸ್ಟಾ ಹುಲ್ಲು ಹಾಸುಗಳನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಪ್ರದೇಶವನ್ನು ಮರುನಾಮಕರಣ ಮಾಡುವ ಉದ್ದೇಶದಿಂದ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಸೆಪ್ಟೆಂಬರ್ 7ರಂದು ವಿಶೇಷ ಸಭೆಯನ್ನು ಕರೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

ರಾಜಪಥವು ರೈಸಿನಾ ಹಿಲ್‌ನಲ್ಲಿರುವ ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್ ಹಾಗೂ ಇಂಡಿಯಾ ಗೇಟ್ ಮೂಲಕ ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಸಾಗುತ್ತದೆ. ಇದೀಗ ಈ ಹಾದಿಯನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಕೇಂದ್ರ ಪ್ರಕಟಿಸಿದೆ.

ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಸಾಹತುಶಾಹಿ ಮನಸ್ಥಿತಿಗೆ ಸಂಬಂಧಿಸಿದ ಚಿಹ್ನೆಗಳ ನಿರ್ಮೂಲನೆಗೆ ಒತ್ತು ನೀಡಿದ್ದರು. ಬ್ರಿಟಿಷರ ಆಳ್ವಿಕೆಯಲ್ಲಿ ರಾಜಪಥವನ್ನು ಕಿಂಗ್ಸ್ ವೇ ಎಂದು ಕರೆಯಲಾಗುತ್ತಿತ್ತು. ಇತ್ತೀಚೆಗೆ ಪ್ರಧಾನಿ ನಿವಾಸವಿರುವ ರಸ್ತೆಯ ಹೆಸರನ್ನು ರೇಸ್ ಕೋರ್ಸ್ ರಸ್ತೆಯಿಂದ ಲೋಕ ಕಲ್ಯಾಣ ಮಾರ್ಗ ಎಂದು ಬದಲಿಸಲಾಯಿತು. ಕಳೆದ ವಾರ ಭಾರತೀಯ ನೌಕಾಪಡೆಯ ಧ್ವಜದಲ್ಲಿ ಉಳಿದುಕೊಂಡಿದ್ದ ವಸಾಹತುಶಾಹಿ ಕುರುಹನ್ನು ತೆಗೆದು ಹಾಕಿ, ಹೊಸ ಧ್ವಜವನ್ನು ಪರಿಚಯಿಸಲಾಯಿತು.

Edited By : Vijay Kumar
PublicNext

PublicNext

05/09/2022 09:58 pm

Cinque Terre

18.87 K

Cinque Terre

0

ಸಂಬಂಧಿತ ಸುದ್ದಿ