ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತದಾರರ ಪಟ್ಟಿ ಕರಡು ತ್ವರಿತವಾಗಿ ಪ್ರಕಟಗೊಳಿಸುವಂತೆ ಸೂಚನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಗಸ್ಟ್‌ 25 ರಂದು ಮತದಾರರ ಪಟ್ಟಿಯ ಕರಡು ಪ್ರಕಟಗೊಳಿಸಬೇಕಿದ್ದು, ಈ ಪೈಕಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯಕ್ರಮಗಳನ್ನು ಕೈಗೊಂಡು ನಿಗದಿತ ವೇಳೆಗೆ ಮತದಾರರ ಪಟ್ಟಿಯ ಕರಡು ಪ್ರಕಟಗೊಳಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

ಮತದಾರರ ಪಟ್ಟಿಯ ಕರಡು ಪ್ರಕಟಿಸುವುದಕ್ಕೂ ಮುನ್ನ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಯಾವುದೇ ಸಮಸ್ಯೆ ಆಗದಂತೆ ಮತದಾರರ ಪಟ್ಟಿಯ ಕರಡನ್ನು ಅಂತಿಮಗೊಳಿಸಬೇಕು. ಜೊತೆಗೆ ಮತದಾರರ ಪಟ್ಟಿ ಕರಡು ಅಂತಿಮವಾದ ಬಳಿಕ ಪ್ರತಿಯನ್ನು ಪಾಲಿಕೆಯ ಅಂತರ್ಜಾಲ ತಾಣದ ಜೊತೆಗೆ ನೋಂದಾಯಿತ ರಾಜಕೀಯ ಪಕ್ಷಗಳು ಹಾಗೂ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳಿಗೆ ನೀಡುವಂತೆ ಸೂಚಿಸಿದರು.

Edited By : Abhishek Kamoji
PublicNext

PublicNext

23/08/2022 08:40 pm

Cinque Terre

17.37 K

Cinque Terre

0

ಸಂಬಂಧಿತ ಸುದ್ದಿ