ಮುಂಬೈ: ಎಲ್ಲಾ ರಾಜ್ಯ ಸರ್ಕಾರಿ ಅಧಿಕಾರಿಗಳು ಕಚೇರಿಗಳಲ್ಲಿ ಫೋನ್ ಕರೆಗಳನ್ನು ತೆಗೆದುಕೊಳ್ಳುವಾಗ 'ಹಲೋ' ಬದಲಿಗೆ 'ವಂದೇ ಮಾತರಂ' ಎಂದು ಹೇಳಬೇಕು ಎಂದು ಮಹಾರಾಷ್ಟ್ರದ ನೂತನ ಸಚಿವ ಸುಧೀರ್ ಮುಂಗಂತಿವಾರ್ ಆದೇಶ ನೀಡಿದ್ದಾರೆ.
"ಸ್ವಾತಂತ್ರ್ಯದ 76ನೇ ವರ್ಷಕ್ಕೆ ನಾವು ಕಾಲಿಡುತ್ತಿದ್ದೇವೆ. ನಾವು ಅಮೃತ ಮಹೋತ್ಸವವನ್ನು (ಸ್ವಾತಂತ್ರ್ಯದ) ಆಚರಿಸುತ್ತಿದ್ದೇವೆ. ಅದಕ್ಕಾಗಿಯೇ ಅಧಿಕಾರಿಗಳು ಮುಂದಿನ ವರ್ಷದ ಜನವರಿ 26 ರೊಳಗೆ ಫೋನ್ ಎತ್ತಿದಾಗ 'ಹಲೋ ಬದಲು ವಂದೇ ಮಾತರಂ' ಎಂದು ಹೇಳಬೇಕೆಂದು ನಾನು ಬಯಸುತ್ತೇನೆ. ಈ ಬಗ್ಗೆ ಆಗಸ್ಟ್ 18 ರೊಳಗೆ ಅಧಿಕೃತ ಸರ್ಕಾರಿ ಆದೇಶ ಬರಲಿದೆ ಎಂದು ಹೇಳಿದರು.
PublicNext
15/08/2022 11:22 am