ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲನ್ನು ಹೇಳುವ ಮೂಲಕ ಕನ್ನಡ ಹಿರಿಮೆಯನ್ನು ಸ್ಮರಿಸಿದ್ದಾರೆ.
ದ್ರೌಪದಿ ಮುರ್ಮು ಅವರು ಕುವೆಂಪು ಅವರ 'ನಡೆ ಮುಂದೆ, ನಡೆ ಮುಂದೆ,..' ಕರೆಯಿಂದ ಕೆಲ ಸಾಲುಗಳನ್ನು ಪ್ರಸ್ತಾಪಿಸಿದರು.
ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
'ನಾನು ಅಳಿವೆ, ನೀನು ಅಳಿವೆ
ನಮ್ಮ ಎಲುಬುಗಳ ಮೇಲೆ
ಮೂಡುವುದು - ಮೂಡುವುದು
ನವ ಭಾರತ ಲೀಲೆ' – ಎಂಬ ಕುವೆಂಪು ಅವರ ಕವನದ ಸಾಲುಗಳನ್ನು ಉಲ್ಲೇಖಿಸಿ, ಅದರಲ್ಲಿರುವ ಆದರ್ಶಗಳನ್ನು ಪಾಲಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದರು. ಜೊತೆಗೆ ಅದರ ಅರ್ಥವನ್ನು ತಿಳಿಸಿದ್ದಾರೆ.
PublicNext
15/08/2022 08:49 am