ನವದೆಹಲಿ: ರಾಜಕೀಯದ ನಂತರ ನಾಗರಿಕ ಸೇವೆಗೆ ಹಿಂತಿರುಗಿದ ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೈಸಲ್ ಗೆ ಕೇಂದ್ರ ಹೊಸ ಹುದ್ದೆ ನೀಡಿದೆ.ಹೌದು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದ್ದ ಐಎಎಸ್ ಅಧಿಕಾರಿ ಶಾ ಫೈಸಲ್ ಅವರು ಈಗ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ತನ್ನ ರಾಜೀನಾಮೆಯನ್ನು ಹಿಂಪಡೆಯುವಂತೆ ಫೈಸಲ್ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದ ನಾಲ್ಕು ತಿಂಗಳ ನಂತರ ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿದೆ ಹಾಗೂ ಎಪ್ರಿಲ್ ನಲ್ಲಿ ಅವರನ್ನು ಸೇವೆಯಲ್ಲಿ ಮರುಸ್ಥಾಪಿಸಿದೆ.ರಾಜೀನಾಮೆ ಬಳಿಕ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್(ಜೆಕೆಪಿಎಂ) ಪಕ್ಷವನ್ನು ಸ್ಥಾಪಿಸಿದ್ದ ಅವರು, ನಂತರ ಭ್ರಮನಿರಸನಗೊಂಡಿದ್ದರು.
ಐಎಎಸ್ ಟಾಪರ್ ಆದ ಜಮ್ಮು ಮತ್ತು ಕಾಶ್ಮೀರದ ಮೊದಲ ನಾಗರಿಕ ಎಂಬ ಹೆಗ್ಗಳಿಕೆ ಫೈಸಲ್ ರದ್ದು.
PublicNext
14/08/2022 01:50 pm