ನವದೆಹಲಿ: ದೇಶದ ಕಾನೂನಿನ ಪ್ರಕಾರ ಪ್ರತಿಯೊಬ್ಬ ಪ್ರಜೆಗೂ 18 ವರ್ಷ ತುಂಬಿದ ಬಳಿಕ ಮತದಾನದ ಹಕ್ಕು ನೀಡಲಾಗಿದೆ. ಆದರೆ ಈಗ 17 ವರ್ಷದವರು ಕೂಡ ತಮ್ಮ ಹೆಸರನ್ನು ನೋಂದಾಯಿಸಲು ಮತದಾನದ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಭಾರತದ ಚುನಾವಣಾ ಆಯೋಗ ಹೇಳಿದೆ.
ಹೌದು ಇನ್ಮುಂದೆ 17 ವರ್ಷ ಮೇಲ್ಪಟ್ಟ ಯುವ ಜನರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮುಂಚಿತವಾಗಿಯೇ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು. ಈ ನಿರ್ಧಾರ ಪ್ರಕಾರ, ಆಗಷ್ಟ್ 1ರಿಂದ ಮತದಾರರ ನೋಂದಣಿ ಮಾಡಬಹುದು. 1 ಏಪ್ರಿಲ್, 1 ಜುಲೈ, 1 ಅಕ್ಟೋಬರ್ 2023ರೊಳಗೆ 18 ವರ್ಷ ಪೂರೈಸುವವರು ಇದಕ್ಕೆ ಅರ್ಹರಾಗಿದ್ದಾರೆ.
PublicNext
28/07/2022 08:33 pm