ಬೆಂಗಳೂರು:ರಾಜ್ಯದ ಸರ್ಕಾರಿ ನೌಕರರು ಸರಿಯಾಗಿ ಬೆಳಗ್ಗೆ 10 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಬೇಕು. ಕಚೇರಿಯ ನಿಗದಿತ ಅವಧಿವರೆಗೂ ನಿಗಧಿತ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸುತ್ತೋಲೆ ಹೊರಡಿಸಿ ಆದೇಶ ನೀಡಿದ್ದಾರೆ.
ಕಚೇರಿ ಅವಧಿಯಲ್ಲಿ ಬೇರೆ ಕೆಲಸ ಅಂತ ಹೋಗೋ ಹಾಗಿಲ್ಲ. ಒಂದು ವೇಳೆ ಹಾಗೆ ಹೋದ್ರೆ, ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆದಿರಲೇಬೇಕು.
ಹಾಗೆ ಹೇಳದೆ ಕೇಳದೆ ಹೋದ್ರೆ, ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಂದಿತಾ ಶರ್ಮಾ ಹೇಳಿದ್ದಾರೆ.
PublicNext
26/07/2022 07:29 am