ಬೆಳಗಾವಿ: ಕುಂದಾನಗರಿಯ ಜನ ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ. ಕಳೆದ ಆರು ತಿಂಗಳಲ್ಲಿ ಸಾವಿರಾರು ಜನರಿಗೆ ನಾಯಿಗಳು ಕಚ್ಚಿದೆ ಎಂಬ ಸ್ಫೋಟಕ ಮಾಹಿತಿ ಆರೋಗ್ಯ ಇಲಾಖೆಯಿಂದಲೇ ಹೊರ ಬಿದ್ದಿದ್ದು, ಬರೋಬ್ಬರಿ 14 ಸಾವಿರ ಜನರ ರಕ್ತ ಹೀರಿವೆ.
ಈ ಕುರಿತು ಡಿಎಚ್‌ಒ ಡಾ.ಮಹೇಶ್ ಕೋಣೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಆರು ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 14,278 ಜನರಿಗೆ ನಾಯಿಗಳು ಕಚ್ಚಿವೆ. ಜನವರಿ 1ರಿಂದ ಜುಲೈವರೆಗೂ ನಾಯಿ ಕಡಿತದ ಕೇಸ್ ದಾಖಲಾಗಿವೆ. ಕಳೆದ ವರ್ಷ 1360 ಜನರಿಗೆ ನಾಯಿ ಕಡಿತದ ಕೇಸ್ ದಾಖಲಾಗಿವೆ. ಆದರೆ ಈ ವರ್ಷ ಆರು ತಿಂಗಳಲ್ಲೇ ಹೆಚ್ಚು ಪ್ರಮಾಣದಲ್ಲಿ ನಾಯಿ ಕಚ್ಚಿವೆ, ನಾಯಿ ಕಡಿತಕ್ಕೆ ಲಸಿಕೆ ಇದ್ದು ಯಾವ ತೊಂದರೆ ಇಲ್ಲ ಎಂದಿದ್ದಾರೆ.
ಸದ್ಯ 1548 ಲಸಿಕಾ ಡೋಸ್‌ಗಳು ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲ ಕಡೆ ಔಷಧಿ ಸ್ಟಾಕ್ ಇದೆ. ನಾಯಿಗಳ ಸಂತಾನ ಹರಣ ಮಾಡಿದರೆ ಇದಕ್ಕೆ ಕಡಿವಾಣ ಹಾಕಬಹುದು ಎಂದು ಡಿಎಚ್‌ಒ ಡಾ.ಮಹೇಶ್ ಕೋಣೆ ಹೇಳಿದರು.
ಸಂತೋಷ ಬಡಕಂಬಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
22/07/2022 04:02 pm