ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಸರ್ಕಾರಿ ನೌಕರರೇ ಎಚ್ಚರ! ಸರ್ಕಾರದ ಅಧಿಕೃತ ಆದೇಶಗಳಲ್ಲಿ ಕನ್ನಡ ದೋಷವಾದರೆ ಸಂಬಳ ಕಟ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರೇ ಎಚ್ಚರ. ಸರ್ಕಾರದ ಆದೇಶಗಳು ಅಥವಾ ಸುತ್ತೋಲೆಗಳನ್ನು ಕನ್ನಡದಲ್ಲಿ ರಚಿಸುವಾಗ ತಪ್ಪು ತಪ್ಪಾಗಿ ಟೈಪಿಂಗ್ ಅಥವಾ ವ್ಯಾಕರಣದಲ್ಲಿ ದೋಷವಾದರೆ ಸಂಬಳದಲ್ಲಿ ಕಡಿತವಾಗಲಿದೆ. ಅಷ್ಟೇ ಅಲ್ಲದೆ ಮುಂಬಡ್ತಿ ಕೂಡ ನಿರಾಕರಿಸಲಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಶುಕ್ರವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ- ವಿಡಿಯೋ ಮಾಡದಂತೆ ಆದೇಶ ಹೊರಡಿಸಿತ್ತು. ಆದರೆ ಅದಕ್ಕೆ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಅದನ್ನು ಹಿಂಪಡೆದು ಸರ್ಕಾರ ಹೊರಡಿಸಿದ ಹೊಸ ಆದೇಶದಲ್ಲಿ ಕರ್ನಾಟಕ ಸೇರಿದಂತೆ ಹಲವು ಪದಗಳಲ್ಲಿ ವ್ಯಾಕರಣ ದೋಷಗಳು ಕಂಡುಬಂದಿದ್ದವು.

ಈ ಸಂಬಂಧ ಮಾತನಾಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಅಧಿಸೂಚನೆ ಹೊರಡಿಸುವ, ಟೈಪಿಂಗ್ ಮಾಡುವ ಅಧಿಕಾರಿಗಳು ಭಾಷೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಈ ಪ್ರಮಾದ ಆಗಿದೆ ಎಂದು ತಿಳಿಸಿದ್ದಾರೆ.

ಕೆಲವು ವೇಳೆ ಇಂಗ್ಲೀಷ್ ನಲ್ಲಿ ಆದೇಶ ಅಥವಾ ಸುತ್ತೋಲೆ ರಚಿಸುವಾಗ ಅಥವಾ ಗೂಗಲ್ ಟ್ರಾನ್ಸ್ಲೇಟ್ ನೆರವು ಪಡೆಯುತ್ತಿರುವುದರಿಂದಲೂ ಈ ರೀತಿಯ ತಪ್ಪುಗಳು ಆಗುತ್ತಿವೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವವರು ರಾಜ್ಯದ ಭಾಷೆಯನ್ನು ಬಲ್ಲವರಾಗಿರಬೇಕು ಎಂದು ಹೇಳಿದ್ದಾರೆ.

ಟೈಪಿಂಗ್ ಮಾಡಿದವರು ಸೇರಿದಂತೆ ಆದೇಶದ ಪತ್ರಕ್ಕೆ ಸಹಿ ಮಾಡಿ ಹೊರಡಿಸಿದ ಅಧಿಕಾರಿಗಳ ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಧಿಕಾರಿಗಳಿಗೆ ನಾಗಾಭರಣ ಕಳುಹಿಸುತ್ತಿದ್ದಾರೆ. ಸರ್ಕಾರಿ ಆದೇಶ, ಅಧಿಸೂಚನೆ ಮತ್ತಿತರ ದಾಖಲಾತಿಗಳಲ್ಲಿ ತಪ್ಪು ಮಾಡಿದವರ ಹೆಸರನ್ನು ಸರ್ವೀಸ್ ರೆಕಾರ್ಡ್ ನಲ್ಲಿ ಸೇರಿಸಬೇಕು, ಈ ರೀತಿ ಆದಾಗ ಅವರ ಸಂಬಳ ಏರಿಕೆಯಾಗಿಲ್ಲ, ಮುಂಬಡ್ತಿ ಸಿಗಲ್ಲ ಎಂದು ಅವರು ತಿಳಿಸಿದರು.

Edited By : Vijay Kumar
PublicNext

PublicNext

19/07/2022 12:06 pm

Cinque Terre

13.41 K

Cinque Terre

1