ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ, ಫೋಟೋ ನಿರ್ಬಂಧ ಹೇರಿರುವ ಆದೇಶವನ್ನು ತಡರಾತ್ರಿ ರಾಜ್ಯ ಹಿಂಪಡೆದಿದೆ. ಈ ಆದೇಶದ ಪ್ರತಿಯಲ್ಲಿ ಕನ್ನಡ ಕಾಗುಣಿತ ದೋಷಗಳು ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಎಂಬ ಪದ ಬಳಕೆ ಬದಲು 'ಕರ್ನಾಟಾ ರಾಜ್ಯಪಾಲರ ಆಜ್ಞಾನುಸಾರ' ಎಂದು ಟೈಪಿಸಲಾಗಿದೆ. ಇನ್ನೊಂದೆಡೆ ಪ್ರಸ್ತಾವನೆ ಬದಲಾಗಿ 'ಪ್ರಸತ್ತಾವನೆ' ಎಂದು ಟೈಪಿಸಲಾಗಿದೆ. ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಭಾರತದ ಅಧಿಕಾರಿಗಳು, ಹಿಂದಿ ಭಾಷಿಕ ಅಧಿಕಾರಿಗಳಿಂದ ಈ ರೀತಿ ತಪ್ಪುಗಳು ಆಗುತ್ತಿವೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಫೋಟೋ, ವಿಡಿಯೋ ಬ್ಯಾನ್ ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿತ್ತು. ಆದರೆ ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ಆದೇಶ ವಾಪಸ್ ಪಡೆಯಲಾಗಿದೆ.
PublicNext
16/07/2022 10:25 am