ನವದೆಹಲಿ: ಭಾರತೀಯ ಯೋಧರಲ್ಲಿ ಸೇನೆ ಸೇರಬೇಕು ಅನ್ನೋದು ಕಿಚ್ಚು ಸಹಜವಾಗಿಯೇ ಇರುತ್ತದೆ. ಅದಕ್ಕಾಗಿಯೇ ಅಗ್ನಿವೀರ್ ದಂತಹ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಆದರೆ, ಕೊರೊನಾ ಕಾರಣ ಕಳೆದ ಎರಡು ವರ್ಷದಿಂದಲೂ ಯಾವುದೇ ಸೇನಾ ನೇಮಕಾತಿ ಆಗಿಯೇ ಇಲ್ಲ. ಹೀಗಿರೋವಾಗ, ಸೇನೆಗೆ ಸಂಬಂಧಿಸಿದ ಅಗ್ನಿಪಥ್ ಯೋಜನೆ ಜಾರಿಗೆ ಆಗುತ್ತಿದ್ದಂತೇನೆ ಸುಮಾರು ಕಡೆಗೆ ಇದನ್ನ ವಿರೋಧಿಸಿ ಪ್ರತಿ ಭಟನೆ ಮಾಡುತ್ತಿದ್ದಾರೆ.
ಸೇನಾ ನೇಮಕಾತಿ ಆಗೋ ಉತ್ತರ ಪ್ರದೇಶ,ಲಕ್ನೋ ಕೇಂದ್ರ, ಬಿಹಾರದ ಬಿರಾನಿ, ರಾಜಸ್ಥಾನದಲ್ಲಿ ಯುವಕರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಪ್ರಾ ಎಂಬ ಪ್ರದೇಶದಲ್ಲಂತೂ ಯುವಕರು ರೈಲು ತಡೆ ನಡೆಸಿದ್ದಾರೆ. ನಿಂತ ರೈಲಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗ್ನಿಪಥ್ ಯೋಜನೆಯಿಂದಲೇ ತಮಗೆ ಅನ್ಯಾಯವಾಗಿದೆ ಅಂತಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಗ್ನಿಪಥ್ ಯೋಜನೆ ಅಡಿ 17.5 ವರ್ಷದಿಂದ 21 ವರ್ಷ ನಿಗದಿ ಮಾಡಲಾಗಿದೆ. ಈ ಮೂಲಕ ಸರ್ಕಾರ ನಮ್ಮೊಂದಿಗೆ ಪಬ್ಜಿ ಆಡ್ತಾ ಇದೆ. ಸೇನಾ ನೇಮಕಾತಿ ರದ್ದು ಮಾಡಿರೋ ಬಗ್ಗೆ ಯಾವುದೇ ಜನಪ್ರತಿನಿಧಿ ಧ್ವನಿ ಎತ್ತಿಯೇ ಇಲ್ಲ. ರಾಜಕಾರಣಿಗಳಿಗೆ ಐದು ವರ್ಷ ಅವಧಿ ನೀಡ್ತಾರೆ.ಸೇನೆ ಸೇರಬೇಕು ಅಂತಲೇ ನಾಲ್ಕು ವರ್ಷ ಅಗ್ನಿವೀರ್ ತರಬೇತಿ ಪಡೆದ ನಾವು ಏನ್ ಮಾಡಬೇಕು ಹೇಳಿ ಅಂತಲೂ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
PublicNext
16/06/2022 02:18 pm